CONNECT WITH US  

ಗ್ಯಾಂಗ್‍ಸ್ಟರ್ ಅಲ್ಲ ಮಾನ್‍ಸ್ಟರ್: ಎನರ್ಜಿಟಿಕ್ ಟ್ರೈಲರ್ ವೀಕ್ಷಿಸಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಹವಾ ಎಬ್ಬಿಸಿರುವ ಬೆನ್ನಲ್ಲೇ ಇದೀಗ ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ 2ನೇ ಟ್ರೈಲರ್ ಅನ್ನು ರಿಲೀಸ್ ಮಾಡುವ ಮೂಲಕ ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ. "ಕೆಜಿಎಫ್' ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಷ್ಟೇ ಅಲ್ಲ ಹಿಂದಿ, ಕನ್ನಡ, ತಮಿಳು, ತೆಲುಗು ಚಿತ್ರರಂಗ ಸಹ ಟ್ರೈಲರ್ ವೀಕ್ಷಿಸಿದ ನಂತರ ನಿಬ್ಬೆರಗಾಗಿತ್ತು. ಟ್ರೈಲರ್ ವೀಕ್ಷಿಸುತ್ತಿದ್ದರೆ ಹಾಲಿವುಡ್ ಸಿನಿಮಾದ ಗುಂಗು ಹಿಡಿಸುವುದಂತೂ ಸತ್ಯ. "ಮೊದಲು ಯಾರು ಹೊಡೆಯುತ್ತಾರೆ ಎಂಬುದು ಮುಖ್ಯವಲ್ಲ, ಮೊದಲು ಯಾರು ನೆಲಕ್ಕೆ ಉರುಳುತ್ತಾನೆ ಎಂಬುದು ಮುಖ್ಯ. ಗ್ಯಾಂಗ್ ಕರೆದುಕೊಂಡು ಬರುವವನು ಗ್ಯಾಂಗ್‍ಸ್ಟರ್, ಒಬ್ಬನೇ ಬರುವವನು ಮಾನ್‍ಸ್ಟರ್…' ಹೀಗೆ ಹಲವು ಪಂಚಿಂಗ್ ಡೈಲಾಗ್‍ಗಳು, ಗುಂಡಿನ ಭೋರ್ಗರೆತ ಹಲವಾರು ಅಂಶಗಳಿವೆ. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ "ಕೆಜಿಎಫ್' ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ "ಕೆಜಿಎಫ್', ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. 80ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಯಶ್​​​ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯ ಕೂಡ ಈ ಚಿತ್ರದಲ್ಲಿ ಸಖತ್ ಡಿಫರೆಂಟ್ ಆಗಿದೆ ಎನ್ನಲಾಗುತ್ತಿದೆ. ಇನ್ನು ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ಭುವನ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಯಶ್ ಎದುರಿಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಇನ್ನುಳಿದಂತೆ ಅನಂತ್ ನಾಗ್, ಮಾಳವಿಕಾ, ಟಿ.ಎಸ್.ನಾಗಾಭರಣ, ಬಿ,ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಎನರ್ಜಿಟಿಕ್ ಟ್ರೈಲರ್ ವೀಕ್ಷಿಸಿ.

Back to Top