ಚಿನ್ನಾರಿ ಮುತ್ತನ “ಕಿಸ್ಮತ್’: ಸೂಪರ್ ಟ್ರೈಲರ್ ವೀಕ್ಷಿಸಿ
Team Udayavani, Nov 14, 2018, 4:08 PM IST
ನಟ ವಿಜಯ ರಾಘವೇಂದ್ರ ನಿರ್ಮಾಣದಲ್ಲಿ “ಕಿಸ್ಮತ್’ ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಟ್ರೈಲರ್ನಲ್ಲಿ “ಟೈಂ ನಲ್ಲಿ ಎರಡು ಥರ, ಒಂದು ಒಳ್ಳೆಯ ಟೈಮ್, ಇನ್ನೊಂದು ಕೆಟ್ಟ ಟೈಮ್…’ಎಂದು ಸಮಯದ ಬಗ್ಗೆ ವಿಜಯ್ ರಾಘವೇಂದ್ರ ಹೇಳಿದ್ದು, ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ತಮ್ಮ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಆ್ಯಕ್ಷನ್, ಕಾಮಿಡಿ ಹಾಗೂ ಹಲವು ಕುತೂಹಲಕಾರಿ ಘಟನೆಗಳ ಸುತ್ತ ಕಥೆ ಸುತ್ತೋ ಝಲಕ್ ಇದೆ. ಎಂದಿನಂತೆ ವಿಜಯ್ ತಮ್ಮ ನಟನೆ, ಆ್ಯಕ್ಷನ್ನಲ್ಲಿ ಮಾಸ್ ಅನ್ನೋದು ಟ್ರೈಲರ್ನಲ್ಲೇ ಗೊತ್ತಾಗುತ್ತಿದೆ. ಅಂದಹಾಗೆ, ಕಾಮಿಡಿ ಥ್ರಿಲ್ಲರ್ ಜಾನರ್ನ ಸಿನಿಮಾ “ಕಿಸ್ಮತ್’ ಚಿತ್ರ ಮಲೆಯಾಳಂ-ತಮಿಳಿನ “ನೇರಂ’ ಚಿತ್ರದ ರಿಮೇಕ್. ಚಿತ್ರಕ್ಕೆ ರಾಜೇಶ್ ಮುರುಗೇಶನ್ ಸಂಗೀತ ನಿರ್ದೇಶನ, ರಾಜೇಶ್ ಯಾದವ್ ಅವರ ಛಾಯಾಗ್ರಹಣವಿದೆ. ವಿಜಯರಾಘವೇಂದ್ರ, ಸಂಗೀತಾ ಭಟ್, ಸುಂದರ್ರಾಜ್, ನವೀನ್ ಕೃಷ್ಣ, ದಿಲೀಪ್ ರಾಜ್, ನಂದ, ತಬಲನಾಣಿ ಮುಂತಾದವರ ತಾರಾಬಳಗವಿದೆ. ಈ ಚಿತ್ರದ ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ಇದೇ ನವೆಂಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ