CONNECT WITH US  

ಕಿಕ್ ಕೊಡ್ತಿದೆ "ಕಿಸ್'ನ ಡೊಂಟು ವರಿ: ಸೂಪರ್ ಸಾಂಗ್ ವೀಕ್ಷಿಸಿ

"ಅದ್ಧೂರಿ', "ಅಂಬಾರಿ', "ರಾಟೆ'ಯಂತಹ ಹಿಟ್​ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಎ.ಪಿ.ಅರ್ಜುನ್‌ "ಕಿಸ್‌' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಇದೀಗ ಚಿತ್ರದ "ಶೀಲ ಸುಶೀಲ ಡೊಂಟು ವರಿ' ಎಂಬ ಹಾಡು ಬಿಡುಗಡೆಯಾಗಿದ್ದು, ಸಿನಿರಸಿಕರಿಗೆ ಸಖತ್ತಾಗೇ ಕಿಸ್​ ಕೊಡ್ತಾ ಇದೆ. ಹೌದು, ಇತ್ತೀಚೆಗಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈ ಹಾಡನ್ನು ರಿಲೀಸ್ ಮಾಡಿದ್ದು, ಈ ವೇಳೆ ಚಿತ್ರತಂಡದ ಜೊತೆಗೆ ನಿರ್ದೇಶಕರಾದ ಬಹದ್ದೂರ್ ಚೇತನ್ ಹಾಗೂ ಮಹೇಶ್ ಗೌಡ ಕೂಡ ಭಾಗಿಯಾಗಿದ್ದರು. ಅಲ್ಲದೇ ಚಿತ್ರದ ಈ ಹಾಡು ಕೇಳಲು ಸಖತ್ ಮಜಾವಾಗಿದ್ದು, ಹಾಡಿನ ಬೀಟ್ಸ್ ಕೇಳುಗರನ್ನ ಕುಣಿಯುವಂತೆ ಮಾಡುತ್ತಿದೆ. ಎ.ಪಿ.ಅರ್ಜುನ್ ಸಾಹಿತ್ಯವಿರುವ ಈ ಹಾಡಿಗೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಧ್ವನಿ ನೀಡಿದ್ದು, ಹಾಡಿನ ಕಿಕ್ ಹೆಚ್ಚಾಗಿದೆ. ಹಾಡಿನಲ್ಲಿ ವಿರಾಟ್ ಹಾಗೂ ಅಪೂರ್ವ ಗೌಡ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಿದೆ. ಇನ್ನು "ಕಿಸ್' ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ವಿರಾಟ್ ಮತ್ತು ಶ್ರೀಲೀಲಾ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದು, "ತುಂಟ ತುಟಿಗಳ ಆಟೋಗ್ರಾಫ್' ಎಂಬ ಟ್ಯಾಗ್‍ಲೈನ್ ಚಿತ್ರಕ್ಕಿದೆ. ಜೊತೆಗೆ ಅನಂತ್ ನಾಗ್, ಚಿಕ್ಕಣ್ಣ, ದತ್ತಣ್ಣ ಮತ್ತು ಸಾಧುಕೋಕಿಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ವಿ.ರವಿಕುಮಾರ್ ಬಂಡವಾಳ ಹೂಡಿದ್ದಾರೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.

Back to Top