CONNECT WITH US  

"ಲಂಬೋದರ'ನ ಗೆಟಪ್‍ನಲ್ಲಿ ಲೂಸ್ ಮಾದ: ಕಾಮಿಡಿ ಟ್ರೈಲರ್ ವೀಕ್ಷಿಸಿ

ಲೂಸ್ ಮಾದ ಯೋಗಿ ಅಭಿನಯದ ವಿಶ್ವೇಶ್ವರ್‌. ಪಿ ಹಾಗೂ ರಾಘವೇಂದ್ರ ಭಟ್‌ ಅವರು ನಿರ್ಮಿಸುತ್ತಿರುವ "ಲಂಬೋದರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಸ್ಯಪ್ರಧಾನ ಈ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. "ಲಂಬೋದರ' ಶೀರ್ಷಿಕೆಗೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವೂ ಇದೆ. ಹೀಗಾಗಿ ಇದು ಪಕ್ಕಾ ಬೆಂಗಳೂರಿನ ಬಸವನಗುಡಿ ಸುತ್ತಮುತ್ತಲಿನ ಕಥೆ ಎಂಬುದು ಸ್ಪಷ್ಟ. ವೃಷಾಂಕ್‌ ಮೂವೀ ಮೇಕರ್ಸ್‌ ಬ್ಯಾನರ್‌ನಲ್ಲಿ ಚಿತ್ರವನ್ನು ತಯಾರಾಗುತ್ತಿದ್ದು, ಕಾರ್ತಿಕ್‌ ಶರ್ಮ ಸಂಗೀತ ಸಂಯೋಜಿಸಿದ್ದಾರೆ. ಅರವಿಂದ್‌ ಎಸ್‌. ಕಶ್ಯಪ್‌ ಛಾಯಗ್ರಹಣವಿದೆ. ಹರೀಶ್‌ ಗಿರಿಗೌಡ ಸಂಕಲನ ಮಾಡಿದ್ದಾರೆ. ಯೋಗರಾಜ್‌ ಭಟ್‌ ಹಾಗೂ ಜಯಂತ ಕಾಯ್ಕಿಣಿ ಗೀತೆಗಳನ್ನು ರಚಿಸಿದ್ದಾರೆ. ವಿಕ್ರಂ ಮೋರ್‌ ಸಾಹಸ ನಿರ್ದೇಶನ, ಕೆ.ಕೃಷ್ಣರಾಜ್‌ ಹಾಗೂ ಶೈಲೇಶ್‌ ರಾಜ್‌ ಜೊತೆಗೂಡಿ ಮಾತುಗಳನ್ನು ಪೋಣಿಸಿದ್ದಾರೆ. ಯೋಗಿಗೆ ಆಕಾಂಕ್ಷ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಧರ್ಮಣ್ಣ, ಅಚ್ಯುತಕುಮಾರ್‌, ಅರುಣಾ ಬಾಲರಾಜ್‌, ಮಂಜುನಾಥ್‌ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ಕಾಮಿಡಿ ಟ್ರೈಲರ್ ವೀಕ್ಷಿಸಿ.

Back to Top