CONNECT WITH US  

ಪೋಲಿ "ಲಂಬೋದರ': ನಾಟಿ ಟ್ರೈಲರ್ ವೀಕ್ಷಿಸಿ

ಕೆ.ಕೃಷ್ಣರಾಜ್ ನಿರ್ದೇಶನದ ಲೂಸ್ ಮಾದ ಯೋಗಿ ಅಭಿನಯದ ವಿಶ್ವೇಶ್ವರ್‌. ಪಿ ಹಾಗೂ ರಾಘವೇಂದ್ರ ಭಟ್‌ ಅವರು ನಿರ್ಮಿಸುತ್ತಿರುವ "ಲಂಬೋದರ' ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದ್ದು, ವಿಭಿನ್ನ ಡೈಲಾಗ್‌ಗಳ ಮೂಲಕ ಸಿನಿರಸಿಕರ ಗಮನ ಸೆಳೆದಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ವೈರಲ್ ಆಗಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಈ ಹಾಸ್ಯಪ್ರಧಾನ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. "ಲಂಬೋದರ' ಶೀರ್ಷಿಕೆಗೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವೂ ಇದೆ. ಹೀಗಾಗಿ ಇದು ಪಕ್ಕಾ ಬೆಂಗಳೂರಿನ ಬಸವನಗುಡಿ ಸುತ್ತಮುತ್ತಲಿನ ಕಥೆ ಎಂಬುದು ಸ್ಪಷ್ಟ. ವೃಷಾಂಕ್‌ ಮೂವೀ ಮೇಕರ್ಸ್‌ ಬ್ಯಾನರ್‌ನಲ್ಲಿ ಚಿತ್ರವನ್ನು ತಯಾರಾಗುತ್ತಿದ್ದು, ಅರವಿಂದ್‌ ಎಸ್‌. ಕಶ್ಯಪ್‌ ಛಾಯಾಗ್ರಹಣವಿದೆ. ಹರೀಶ್‌ ಗಿರಿಗೌಡ ಸಂಕಲನ ಮಾಡಿದ್ದಾರೆ. ಯೋಗರಾಜ್‌ ಭಟ್‌ ಹಾಗೂ ಜಯಂತ ಕಾಯ್ಕಿಣಿ ಗೀತೆಗಳನ್ನು ರಚಿಸಿದ್ದು, ವಿಕ್ರಂ ಮೋರ್‌ ಸಾಹಸ ನಿರ್ದೇಶನವಿದೆ, ಯೋಗಿಗೆ ಆಕಾಂಕ್ಷ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಧರ್ಮಣ್ಣ, ಅಚ್ಯುತಕುಮಾರ್‌, ಅರುಣಾ ಬಾಲರಾಜ್‌, ಮಂಜುನಾಥ್‌ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಟಿ ಟ್ರೈಲರ್ ವೀಕ್ಷಿಸಿ.

Back to Top