CONNECT WITH US  

ಮುಖವಾಡದ ನಡುವಿನ "ಲೌಡ್‌ ಸ್ಪೀಕರ್‌': ಬೊಂಬಾಟ್ ಟ್ರೈಲರ್ ವೀಕ್ಷಿಸಿ

ನೀನಾಸಂ ಭಾಸ್ಕರ್‌, ಕಾವ್ಯಾ ಶಾ ಅಭಿನಯದ "ಲೌಡ್‌ ಸ್ಪೀಕರ್‌' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಈ ಹಿಂದೆ "ಮಳೆ' ಮತ್ತು "ಧೈರ್ಯಂ' ಚಿತ್ರ ನಿರ್ದೇಶಿಸಿದ್ದ ಶಿವತೇಜಸ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ಈ ಹಿಂದೆ "ಧೈರ್ಯಂ' ಸಿನಿಮಾ ನಿರ್ಮಿಸಿದ ರಾಜ್‌ ಅವರೇ ಈ ಚಿತ್ರಕ್ಕೂ ನಿರ್ಮಾಪಕರು. ಈಗಾಗಲೇ ಚಿತ್ರದ ಹಾಡು "ಚಡ್ಡಿಯೊಳಗೆ ಇರುವೆ ಬಿಟ್ಕೊಳ್ಳಿ' ಹಾಡು ಹಿಟ್‌ ಆಗಿದ್ದು, ಟ್ರೈಲರ್‌ಗೂ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ಇಲ್ಲೂ ಹೊಸಬರೇ ಇದ್ದಾರೆ. ಈ ಚಿತ್ರದಲ್ಲಿ ಮುಖ ಹಾಗೂ ಮುಖವಾಡದ ನಡುವಿನ ಬದುಕು, ಯುವಜನತೆಯ ಮೊಬೈಲ್‌ ಪ್ರೇಮ ಸೇರಿದಂತೆ ಹಲವು ಅಂಶಗಳ ವಿಷಯವಿದೆ. ಚಿತ್ರದಲ್ಲಿ ಅಭಿಷೇಕ್‌, ಸುಮಂತ್‌ ಭಟ್‌, ಕಾರ್ತಿಕ್‌ ರಾವ್‌, ಅನುಷಾ, ದಿಶಾ ಪ್ರಮುಖ ಪಾತ್ರ ಮಾಡಿದ್ದಾರೆ. ಇವರೊಂದಿಗೆ ರಂಗಾಯಣ ರಘು ದತ್ತಣ್ಣ ನಟಿಸಿದ್ದಾರೆ. ಹರ್ಷವರ್ಧನ್‌ ಚಿತ್ರಕ್ಕೆ ಸಂಗೀತ ನೀಡಿದರೆ, ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.

Back to Top