ನೈಜ ಘಟನೆಯ “ನಡುವೆ ಅಂತರವಿರಲಿ’: ರೋಮ್ಯಾಂಟಿಕ್ ಟ್ರೈಲರ್ ವೀಕ್ಷಿಸಿ
Team Udayavani, Oct 2, 2018, 3:23 PM IST
“ನಡುವೆ ಅಂತರವಿರಲಿ’ ಚಿತ್ರದ ಟ್ರೈಲರ್ ಅನ್ನು ಪುನೀತ್ ರಾಜಕುಮಾರ್ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ನಿರ್ದೇಶಕರ ಕೆಲಸವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಹದಿಹರೆಯದ ತಲ್ಲಣಗಳನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿರುವ ನಿರ್ದೇಶಕರು ಸಿನಿಮಾ ರಂಗದಲ್ಲಿ ಭರವಸೆಯ ಹಾದಿಯಲ್ಲಿ ನಿಲ್ಲುತ್ತಾರೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೇ ಟ್ರೈಲರ್ ಕುತೂಹಲವನ್ನು ಹುಟ್ಟುಹಾಕಿದ್ದು, ಕಲಾವಿದರು ಮತ್ತು ತಂತ್ರಜ್ಞರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದಿದ್ದಾರೆ ಪುನೀತ್. ಅಕ್ಟೋಬರ್ 5 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್- ಜಿ.ಕೆ. ನಾಗರಾಜು ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಪ್ರಖ್ಯಾತ್ ಪರಮೇಶ್ ಎಂಬ ನವ ಪ್ರತಿಭೆ ಈ ಚಿತ್ರದ ಮೂಲಕ ನಾಯಕರಾಗಿ ಪರಿಚಯವಾಗುತ್ತಿದ್ದು, ಅವರಿಗೆ ಜೋಡಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ. ಕಾಲೇಜ್ ಹುಡುಗ- ಹುಡುಗಿಯರ ಲವ್ ಸ್ಟೋರಿ ಜೊತೆಗೆ ಪ್ರಸ್ತುತ ಜನರೇಷನ್ ಗೆ ಸಂಬಂಧಿಸಿದ ನೈಜ ಘಟನೆಯನ್ನು ಚಿತ್ರ ಆಧಾರಿಸಿದೆ. ಚಿತ್ರದಲ್ಲಿ “ಟ್ರಂಕ್’ ಚಿತ್ರದ ನಿರ್ದೇಶಕಿ ರಿಶಿಕಾ ಶರ್ಮ ಅವರನ್ನು ಸಹ ಕಾಣಬಹುದು. ಜೊತೆಗೆ ಚಿಕ್ಕಣ್ಣ, ಅರುಣಾ ಬಾಲರಾಜ್, ರಕ್ಷಿತ್ ಕುಮಾರ್, ಮಂಜು ಮಾಂಡವ್ಯ, ತುಳಸಿ ಶಿವಮಣಿ, ಶ್ರೀನಿವಾಸಪ್ರಭು ಹಾಗೂ ಇನ್ನಿತರರು ಚಿತ್ರದ ತಾರಾಬಳಗದಲ್ಲಿದ್ದು, ಈ ಚಿತ್ರವನ್ನು ರವೀನ್ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನು ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮತ್ತು ಗೌಸ್ ಪೀರ್ ಸಾಹಿತ್ಯ, ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಚಿತ್ರದ ರೋಮ್ಯಾಂಟಿಕ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ