CONNECT WITH US  

"ಡ್ಯಾನ್ಸ್‌ ವಿಥ್ ಅಪ್ಪು': ಪವರ್‌ಫುಲ್ ಸಾಂಗ್ ವೀಕ್ಷಿಸಿ

ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ "ನಟಸಾರ್ವಭೌಮ' ಸಿನಿಮಾದ ಪೋಸ್ಟರ್ ಹಾಗೂ ಟೀಸರ್​ ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಹೌದು, "ಡ್ಯಾನ್ಸ್‌ ವಿಥ್ ಅಪ್ಪು' ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್‍ನಲ್ಲಿದೆ. ಕೆಲ ದಿನಗಳ ಹಿಂದೆ ಪಾರ್ಟಿ ಸಾಂಗ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಎರಡನೇ ಹಾಡನ್ನು ಬಿಟ್ಟಿದೆ. ಅಲ್ಲದೇ "ಡ್ಯಾನ್ಸ್‌ ವಿಥ್ ಅಪ್ಪು' ಹಾಡಿಗೆ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌ ಸಾಹಿತ್ಯ ಬರೆದಿದ್ದು, ಡಿ.ಇಮಾನ್‌ ಸಂಗೀತ ಸಂಯೋಜಿಸಿದ್ದಾರೆ. ಸಂಚಿತ್‌ ಹೆಗ್ಡೆ ಹಾಗೂ ಕಾಲಿವುಡ್‌ನ ಖ್ಯಾತ ಗಾಯಕ ಅಂಥೋನಿ ದಾಸ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ. ಈ ಹಾಡಿನಲ್ಲಿ ಅಪ್ಪು ಭರ್ಜರಿ ಸ್ಟೆಪ್ ಹಾಕಿದ್ದು, ಮೇಕಿಂಗ್ ದೃಶ್ಯವೂ ಇದೆ. ಇಂದು ಸಂಜೆ ಹುಬ್ಬಳ್ಳಿಯಲ್ಲಿ ಚಿತ್ರದ ಆಡಿಯೋ ರಿಲೀಸ್‌ ಕಾರ್ಯಕ್ರಮವಿದ್ದು, ಉಳಿದ ಹಾಡುಗಳು ಹೇಗಿರಲಿವೆ ಅನ್ನೋ ಕುತೂಹಲವು ಅಭಿಮಾನಿಗಳಲ್ಲಿದೆ. ಇನ್ನು ಅಪ್ಪು ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ಈ ಸಿನಿಮಾವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಿದ್ದಾರೆ. ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಟಿಸಿದ್ದಾರೆ. ಇಮಾನ್‌ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ಫೆಬ್ರವರಿ 7 ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಪವರ್‌ಫುಲ್ ಸಾಂಗ್ ವೀಕ್ಷಿಸಿ.

Back to Top