CONNECT WITH US  

ಮತ್ತೊಮ್ಮೆ ಬಂತು "ಓ ಪ್ರೇಮವೇ': ಕಲರ್‌ಫ‌ುಲ್‌ ಟ್ರೈಲರ್ ವೀಕ್ಷಿಸಿ

ಮನೋಜ್‌ ನಾಯಕನಾಗಿ ನಟಿಸಿರುವ "ಓ ಪ್ರೇಮವೇ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನಟ ದರ್ಶನ್‌ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇನ್ನು ಚಿತ್ರದ ನಾಯಕನಾಗಿ ನಾಯಕರಾಗಿಯಷ್ಟೇ ಅಲ್ಲ, ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ ಮನೋಜ್. ಚಿತ್ರದಲ್ಲಿ ನಿಕಿ ಗರ್ಲಾನಿ ನಾಯಕಿ. ಆರಂಭದಲ್ಲಿ ನಾವು ಮೂರು ಟ್ರೈಲರ್ ಕಟ್‌ ಮಾಡಿದೆವು. ಅಂತಿಮವಾಗಿ ಅದರಲ್ಲಿ ಯಾವುದು ಬೆಸ್ಟ್‌ ಎನಿಸಿತೋ ಅದನ್ನು ಆಯ್ಕೆ ಮಾಡಿದೆವು. ಈ ಟ್ರೇಲರ್‌ನಲ್ಲಿ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲಾ ಅಂಶಗಳೂ ಇವೆ' ಎಂಬುದು ಮನೋಜ್ ಅವರ ಮಾತು. ಚಿತ್ರಕ್ಕೆ ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ. "ಸಿನಿಮಾ ತುಂಬಾ ಕಲರ್‌ಫ‌ುಲ್‌ ಆಗಿದೆ. ನಿರ್ದೇಶಕರು ತುಂಬಾ ಗಮನಹರಿಸಿ ಈ ಸಿನಿಮಾ ಮಾಡಿದ್ದಾರೆ. ಯಾವ ಭಾಗದ ಚಿತ್ರೀಕರಣ ಮಾಡುತ್ತಾರೋ ಆ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಇಡೀ ಸಿನಿಮಾವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ' ಎನ್ನುವುದು ಅವರ ಮಾತು. ಚಿತ್ರದ ಕಲರ್‌ಫ‌ುಲ್‌ ಟ್ರೈಲರ್ ವೀಕ್ಷಿಸಿ.

Back to Top