“ಒಂದಲ್ಲಾ ಎರಡಲ್ಲಾ’ದ ಐಸು ಪೈಸು: ಎಮೋಟಿಕಲ್ ಸಾಂಗ್ ವೀಕ್ಷಿಸಿ.
Team Udayavani, Aug 22, 2018, 4:45 PM IST
ಮಾಸ್ಟರ್ ರೋಹಿತ್ ಅಭಿನಯದ “ಒಂದಲ್ಲಾ ಎರಡಲ್ಲಾ’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಐಸು ಪೈಸು ರೀ… ಆಟ ಹೀಗೆ ರೀ…’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಕ್ಕೆ “ರಾಮಾ ರಾಮಾ ರೇ’ ನಿರ್ದೇಶಕ ಡಾ. ಸತ್ಯಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದು, ಡಿ.ಸತ್ಯ ಪ್ರಕಾಶ್ ಅವರು ಸಹ ನಿರ್ಮಾಪಕರಾಗಿದ್ದು, ಹೆಬ್ಬುಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಅಲ್ಲದೇ ವಾಸುಕಿ ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ವರದರಾಜ ಕಾಮತ್ ಕಲಾನಿರ್ದೇಶನ, ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಸ್ಮಿತಾ ಉಮಾಪತಿ ಅವರ ಡಿ.ಎನ್ ಸಿನಿಮಾ ಬ್ಯಾನರ್ ನಲ್ಲಿ ಚಿತ್ರ ತಯಾರಾಗಿದ್ದು, ತಾರಾಗಣದಲ್ಲಿ ಸಾಯಿ ಕೃಷ್ಣ ಕುಡ್ಲ, ನಾಗಭೂಷಣ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದ ಎಮೋಟಿಕಲ್ ಸಾಂಗ್ ವೀಕ್ಷಿಸಿ.