“ಆರೆಂಜ್ ಆರೆಂಜ್’ನಲ್ಲಿ ಗಣೇಶ್ ಗುಣಗಾನ: ಗೋಲ್ಡನ್ ಸಾಂಗ್ ವೀಕ್ಷಿಸಿ
Team Udayavani, Dec 6, 2018, 3:11 PM IST
ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ “ಆರೆಂಜ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಆರೆಂಜ್ ಆರೆಂಜ್’ ಎಂಬ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಕಂಪ್ಲೀಟ್ ಗಣೇಶ್ ಹುಟ್ಟಿ, ಬೆಳೆದ ಊರಿನಿಂದ ಹಿಡಿದು, ಸದ್ಯ ಗೋಲ್ಡನ್ ಸ್ಟಾರ್ ಆಗಿ ಮೆರೆಯುತ್ತಿರುವುದರ ಗುಣಗಾನ ಮಾಡಲಾಗಿದೆ. ಕವಿರಾಜ್ ಸಾಹಿತ್ಯವಿರುವ ಹಾಡಿಗೆ ನಿರ್ದೇಶಕ ಎಸ್.ಎಸ್.ತಮನ್ ಮ್ಯೂಸಿಕ್ ನೀಡಿದ್ದಾರೆ. ಈ ಸಾಂಗ್ನಲ್ಲಿ ಗಣಿ ಗೋಲ್ಡನ್ ಕಲರ್ ಕಾಸ್ಟೂಮ್ನಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ “ಜೂಮ್’ ನಿರ್ದೇಶಕ ಪ್ರಶಾಂತ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಗಣೇಶ್ ಜೊತೆಗೆ ಇದು ಎರಡನೇ ಸಿನಿಮಾ. ಅಲ್ಲದೇ “ಜೂಮ್’ ಚಿತ್ರಕ್ಕೆ ಸಂಗೀತ ನೀಡಿದ್ದ ತಮನ್ ಅವರೇ ಈ ಚಿತ್ರಕ್ಕೆ ಮ್ಯೂಸಿಕ್ ಸಂಯೋಜಿಸಿದ್ದು. ನವೀನ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಗಣೇಶ್ ಎದುರಿಗೆ “ರಾಜಕುಮಾರ’ ಚಿತ್ರದ ಪ್ರಿಯಾ ಆನಂದ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಲ್ಲದೇ ಚಿತ್ರವು ಡಿಸೆಂಬರ್ 7ರಂದು ತೆರೆಗೆ ಬರಲಿದೆ. ಚಿತ್ರದ ಗೋಲ್ಡನ್ ಸಾಂಗ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ