CONNECT WITH US  

"ಪಾದರಸ' ಬಿಡುಗಡೆ ಮಾಡಿದ ಪುನೀತ್‌: ಮ್ಯೂಸಿಕಲ್ ಟೀಸರ್ ವೀಕ್ಷಿಸಿ

ಸಂಚಾರಿ ವಿಜಯ್‌ ಅಭಿನಯದ "ಪಾದರಸ' ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪುನೀತ್‌ರಾಜಕುಮಾರ್‌ ಅವರು ಚಿತ್ರದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಋಷಿಕೇಶ್‌ ಮುಖರ್ಜಿ ತಮ್ಮ ಚಿತ್ರತಂಡದ ಜೊತೆಗೆ ರಾಕ್‌ಲೈನ್‌ ಸ್ಟುಡಿಯೋಗೆ ತೆರಳಿ, ಅಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಪುನೀತ್‌ ರಾಜಕುಮಾರ್‌ ಅವರಿಂದ ಚಿತ್ರದ ಟೀಸರ್‌ ಬಿಡುಗಡೆ ಮಾಡಿಸಿದ್ದಾರೆ. ಈ ವೇಳೆ ಪುನೀತ್‌, "ಸಂಚಾರಿ ವಿಜಯ್‌ ಅವರು ರಾಷ್ಟ್ರಪ್ರಶಸ್ತಿ ವಿಜೇತರು. ಅವರಿಗೆ ಈ ಚಿತ್ರ ಕಮರ್ಷಿಯಲ್‌ ಹಿಟ್‌ ಆಗಲಿ. ಚಿತ್ರತಂಡಕ್ಕೂ ಗೆಲುವು ಸಿಗಲಿ' ಎಂದು ಶುಭಕೋರಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕರಾದ ಕೃಷ್ಣ ರೇವಣ್‌ಕರ್‌, ಪ್ರಕಾಶ್‌, ಸಂಚಾರಿ ವಿಜಯ್‌ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಜರಿದ್ದರು. ಸಂಗೀತ ನಿರ್ದೇಶಕ ಎ.ಟಿ.ರವೀಶ್‌ ಅವರು ಚಿತ್ರಕ್ಕೆ ಆರು ಹಾಡುಗಳನ್ನು ನೀಡಿದ್ದಾರೆ. ಎಂ.ಬಿ.ಹಳ್ಳಿಕಟ್ಟೆ ಛಾಯಗ್ರಹಣವಿದೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ಸಂಚಾರಿ ವಿಜಯ್‌ ಅವರಿಗೆ ವೈಷ್ಣವಿ ಮೆನನ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಜಯಂತ್‌ಕಾಯ್ಕಿಣಿ ಅವರ ಸಾಹಿತ್ಯವಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, "ಪಾದರಸ' ಜೂನ್‌ನಲ್ಲಿ ತೆರೆಗೆ ಬರಲಿದೆ. ಚಿತ್ರದ ಮ್ಯೂಸಿಕಲ್ ಟೀಸರ್ ವೀಕ್ಷಿಸಿ.

Back to Top