CONNECT WITH US  

ಸಂಚಾರಿ ವಿಜಯ್‌ರ ಹೊಸ "ಪಾದರಸ': ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ

ಸಂಚಾರಿ ವಿಜಯ್‌ ಅಭಿನಯದ "ಪಾದರಸ' ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಚಿತ್ರವನ್ನು ಋಷಿಕೇಶ್‌ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ಸಿಕ್ಕಿದೆ. ಚಿತ್ರದಲ್ಲಿ ವೈಷ್ಣವಿ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮನಸ್ವಿನಿ ಕೂಡ ಮತ್ತೊಬ್ಬ ನಾಯಕಿಯಾಗಿದ್ದಾರೆ. ಕೃಷ್ಣ ರೇವಣ್‌ಕರ್‌ ಈ ಚಿತ್ರದ ನಿರ್ಮಾಪಕರು. ಪ್ರಕಾಶ್‌ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ. ಎ.ಟಿ.ರವೀಶ್‌ ಅವರ ಸಂಗೀತವಿದೆ. ಎಂ.ಬಿ.ಅಳ್ಳಿಕಟ್ಟೆ ಛಾಯಾಗ್ರಹಣವಿದೆ. ಸಂಜಯ್‌ ಕುಲಕರ್ಣಿ, ಜಯಂತ್‌ ಕಾಯ್ಕಿಣಿ ಗೀತೆ ರಚಿಸಿದ್ದಾರೆ. ಕೆ.ಎಂ.ಪ್ರಕಾಶ್‌ ಅವರ ಸಂಕಲನವಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.

Back to Top