“ಪತಿಬೇಕು.com’ನಲ್ಲಿ ಶೀತಲ್ ಶೆಟ್ಟಿ: ಬೊಂಬಾಟ್ ಟ್ರೈಲರ್ ವೀಕ್ಷಿಸಿ
Team Udayavani, Aug 7, 2018, 3:49 PM IST
ಶೀತಲ್ ಶೆಟ್ಟಿ ಅಭಿನಯದ “ಪತಿಬೇಕು.com’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ರೆಸ್ಪಾನ್ಸ್ ಸಿಕ್ಕಿದೆ ಹಾಗೂ ಮೂರು ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ಟ್ರೈಲರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ನಲ್ಲಿ ಶೀತಲ್ ತಮ್ಮ ಮಾತಿನ ಮೋಡಿಯ ಮೂಲಕ ಗಮನ ಸೆಳೆದಿದ್ದು, ಜೈ ಮಾರುತಿ ಪಿಕ್ಚರ್ ಬ್ಯಾನರ್ ನಲ್ಲಿ ಬರುತ್ತಿರುವ ಈ ಚಿತ್ರವನ್ನು ರಾಕೇಶ್ ಅವರು ನಿರ್ದೇಶಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಶೀತಲ್ ಶೆಟ್ಟಿ, ಹರಿಣಿ, ಕೃಷ್ಣಾ ಅಡಿಗಾ ಇದ್ದಾರೆ. ಇನ್ನು ಈ ಚಿತ್ರಕ್ಕೆ ಸುದೀಪ್, ಆಮಿ ಜಾಕ್ಸನ್ ಹಾಗೂ ಪ್ರೇಮ ಅವರು ಶುಭಾಶಯ ಕೋರಿದ್ದಾರೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.