CONNECT WITH US  

"ಪೊಗರು' ಲುಕ್‍ನಲ್ಲಿ ಆ್ಯಕ್ಷನ್ ಪ್ರಿನ್ಸ್: ಮಾಸ್ ಟೀಸರ್ ವೀಕ್ಷಿಸಿ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ "ಪೊಗರು' ಚಿತ್ರತಂಡ ಭರ್ಜರಿ ಗಿಫ್ಟ್​ ನೀಡಿದೆ. ಬಹದ್ದೂರ್ ಹುಡುಗನ ಜನ್ಮದಿನದ ಉಡುಗೊರೆ ಆಗಿ "ಪೊಗರು' ಚಿತ್ರತಂಡ ಚಿತ್ರದ ಗ್ರ್ಯಾಂಡ್ ಟೀಸರ್ ರಿಲೀಸ್ ಮಾಡಿದೆ. ಟೀಸರ್​ನಲ್ಲಿ ರ‍್ಯಾಪರ್ ಕಿಂಗ್​ ಚಂದನ್ ಶೆಟ್ಟಿ ಹಾಡಿರುವ ಪಕ್ಕಾ ಮಾಸ್ ಥೀಮ್ ಸಾಂಗ್​ಗೆ ಧ್ರುವ ಸರ್ಜಾ ಜಬರ್​ದಸ್ತ್​ ಸ್ಟೆಪ್ ಹಾಕಿದ್ದಾರೆ. ‌ಟೈಟಲ್​ಗೆ ತಕ್ಕಂತೆ ಪಕ್ಕಾ ಖದರ್ ಲುಕ್​ನಲ್ಲಿ ಮಿಂಚಿದ್ದು, ಮಾಸ್ ಆಡಿಯನ್ಸ್​ಗೆ ಇಷ್ಟವಾಗುವಂತಿದೆ. ಮುಖ್ಯವಾಗಿ ಟೀಸರ್​ನಲ್ಲಿ ಧ್ರುವ ಹೇಳಿರುವ ಖಡಕ್​ ಮಾಸ್ ಡೈಲಾಗ್​​ಗಳು ಪಡ್ಡೆ ಹೈಕಳ ಅಡ್ಡಾದಲ್ಲಿ ಸದ್ದು ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದೆ. ಇನ್ನು ಟೀಸರ್‌ಗಾಗಿಯೇ 10 ಲಕ್ಷ ಖರ್ಚು ಮಾಡಲಾಗಿದ್ದು, 50 ಕಿರಿಯ ಕಲಾವಿದರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ 50ಕ್ಕೂ ಹೆಚ್ಚು ಫೈಟರ್‌ಗಳು ಕೆಲಸ ಮಾಡಿದ್ದು, ಚಿತ್ರಕ್ಕೆ ಅರ್ಜುನ್ ಸರ್ಜಾ ಬರೆದ ಕಥೆಯನ್ನು ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದು, ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಧ್ರುವಗೆ ಯಾರು ನಾಯಕಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಟೀಸರ್ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ 4ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಭರ್ಜರಿಯಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಧ್ರುವ ಸರ್ಜಾ "ಅದ್ಧೂರಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ "ಬಹದ್ದೂರ್', "ಭರ್ಜರಿ' ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಚಿತ್ರದ ಮಾಸ್ ಟೀಸರ್ ವೀಕ್ಷಿಸಿ.

Back to Top