CONNECT WITH US  

ಸರ್ಜಾ ಫ್ಯಾಮಿಲಿ ಜತೆ ದರ್ಶನ್‌ ಹೆಜ್ಜೆ: ಹನುಮ ಗೀತೆಯ ಲಿರಿಕಲ್‌ ವೀಡಿಯೋ

ಅರ್ಜುನ್‌ ಸರ್ಜಾ ನಿರ್ದೇಶಿಸಿ-ನಿರ್ಮಿಸಿರುವ "ಪ್ರೇಮ ಬರಹ' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ವಿಶೇಷತೆಯೆಂದರೆ, ಹನುಮನ ಹಾಡೊಂದಕ್ಕೆ "ಚಾಲೆಂಜಿಂಗ್‌ ದರ್ಶನ್‌' ಹೆಜ್ಜೆ ಹಾಕಿರುವುದು. ಅಷ್ಟೇ ಅಲ್ಲ, ಅವರೊಂದಿಗೆ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ಅರ್ಜುನ್‌ ಸರ್ಜಾ ಸಹ ಹೆಜ್ಜೆ ಹಾಕುವ ಮೂಲಕ ಆ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ಇರುವ "ಪ್ರೇಮ ಬರಹ' ಚಿತ್ರಕ್ಕೆ ವಿಜಯ ನರಸಿಂಹ ಸಾಹಿತ್ಯ ಬರೆದಿದ್ದಾರೆ. ಹನುಮಾನ್‌ ಚಾಲೀಸ್‌ ಹಾಡಿಗೆ ಎಸ್‌.ಪಿ.ಬಾಲಸುಬ್ರಮಣ್ಯಂ ಧ್ವನಿಯಾಗಿದ್ದಾರೆ. ಆ ಹಾಡನ್ನು ನೃತ್ಯ ನಿರ್ದೇಶಕ ಮೋಹನ್‌ ಸಂಯೋಜಿಸಿದ್ದಾರೆ. ಈ ಹಾಡಿನ ಲಿರಿಕಲ್‌ ವೀಡಿಯೋ ನಿಮಗಾಗಿ ...

Back to Top