CONNECT WITH US  

"ಪುಟ 109'ರ ಹಾಡಿನಲ್ಲಿ ಜೆಕೆ: ಸೂಪರ್ ಸಾಂಗ್ ವೀಕ್ಷಿಸಿ

ನಿರ್ದೇಶಕ ದಯಾಳ್‌ ಪದ್ಮನಾಭ್‌ "ಕರಾಳ ರಾತ್ರಿ' ಚಿತ್ರದ ನಂತರ ಆ್ಯಕ್ಷನ್ ಕಟ್‌ ಹೇಳಿರೋ "ಪುಟ 109' ನಾಟಕಾಧಾರಿತ ಕ್ರೈಂ ಸಸ್ಪೆನ್ಸ್ ಕಥೆಯುಳ್ಳ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಜೆಕೆ‌ ಪೊಲೀಸ್ ಕಾಪ್ ಆಗಿ ಕಾಣಿಸಿಕೊಂಡಿದ್ದು, ಕ್ರಿಮಿನಲ್ಸ್​ಗಳನ್ನು ಮಟ್ಟ ಹಾಕುವ ಹಾಡು ಇದಾಗಿದೆ. ಹಾಡಿಗೆ ಪಣೇಶ್ ರಾಜ್​ರ ಸಾಹಿತ್ಯವಿದ್ದು, ರಂಜಿತ್ ದಿವ್ಯ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಅಲ್ಲದೇ ಈ ಹಾಡಿನಲ್ಲಿ ಜೆಕೆ ಕಟ್ಟು ಮಸ್ತಾದ ಸಿಕ್ಸ್ ಪ್ಯಾಕ್ ದೇಹವನ್ನ ಪ್ರದರ್ಶನ ಮಾಡಿದ್ದಾರೆ. ಇನ್ನು ಈ ಚಿತ್ರ ಒಂದು ಕ್ರೈಮ್‌ ಥ್ರಿಲ್ಲರ್‌ ಕಥಹಂದಾರವನ್ನೊಳಗೊಂಡಿದ್ದು, ಅರವಿಂದ್‌ ಅವರ ಕಥೆ, ದಯಾಳ್‌ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ನಿರ್ಮಾಣವೂ ಇವರದೇ. ಇವರ ಜೊತೆಗೆ ಅವಿನಾಶ್‌ ಯು ಶೆಟ್ಟಿ ನಿರ್ಮಾಣದಲ್ಲಿ ಸಾಥ್‌ ಕೊಟ್ಟಿದ್ದಾರೆ. ಚಿತ್ರದಲ್ಲಿ ವೈಷ್ಣವಿ, ಶ್ರೀ, ವಿಕ್ಟರಿ ವಾಸು ಇತರರು ನಟಿಸಿದ್ದಾರೆ. ಪಿಕೆಎಚ್‌ ದಾಸ್‌ ಛಾಯಾಗ್ರಹಣ, ಗಣೇಶ್‌ ನಾರಾಯಣ್‌ ಸಂಗೀತ ಸಂಯೋಜನೆ, ನವೀನ್ ಕೃಷ್ಣ ನಟನೆ ಜೊತೆಗೆ ಸಿನಿಮಾಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.

Back to Top