CONNECT WITH US  

"ಇವಳೇ ಪುಟ್ಟರಾಜು ಲವ್ವರ್‌ ಶಶಿಕಲಾ': ಸೂಪರ್ ಟ್ರೈಲರ್ ವೀಕ್ಷಿಸಿ

ಹೊಸಬರ "ಪುಟ್ಟರಾಜು ಲವ್ವರ್‌ ಆಫ್ ಶಶಿಕಲಾ' ಟ್ರೈಲರ್ ಬಿಡುಗಡೆಯಾಗಿದ್ದು, ಸಹದೇವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದೊಂದು ಕೋಕೋ ಕ್ರೀಡೆ ಸುತ್ತ ನಡೆಯುವ ಕಥೆ ಹೊಂದಿದೆ. ಪ್ರಮುಖವಾಗಿ ನೈಜ ಘಟನೆಯೊಂದರ ಸುತ್ತ ಹೆಣೆದ ಕಥೆ. 2001 ರಲ್ಲಿ ತುಮಕೂರು ಸಮೀಪ ನಡೆದ ಒಂದು ಘಟನೆ ಚಿತ್ರಕ್ಕೆ ಸ್ಫೂರ್ತಿ. ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿ ನಡುವೆ ನಡೆಯೋ ಕಥೆಯಲ್ಲಿ ಕೋಕೋ ಆಟ ಪ್ರಧಾನವಾಗಿದೆಯಂತೆ. ಚಿತ್ರದ ನಾಯಕಿ ರಾಜ್ಯ ಕೋಕೋ ಆಟಗಾರ್ತಿ. ಅವಳ ಮೇಲೆ ಆ ಹುಡುಗನಿಗೆ ಮನಸ್ಸಾಗುತ್ತೆ. ಅವಳನ್ನು ಹೇಗಾದರೂ ಮಾಡಿ ಪಟಾಯಿಸಬೇಕು ಅಂತಾನೇ, ಕೋಕೋ ಆಟಕ್ಕೆ ಸೇರಿಕೊಳ್ಳುತ್ತಾನೆ. ಆದರೆ, ಅವನ ಕಳಪೆ ಆಟ ಪ್ರದರ್ಶನದಿಂದ ಆ ಕೋಕೋ ಆಟದಿಂದ ಹೊರಬರುತ್ತಾನೆ. ಆಮೇಲೆ ಏನಾಗುತ್ತೆ ಎಂಬುದು ಕಥೆ. ನಾಗರಾಜು, ರಾಜು ಬಾಲಕೃಷ್ಣ ನಿರ್ಮಾಪಕರು. ಅಮಿತ್‌ ನಾಯಕ, ಸುಶ್ಮಿತಾ ಸಿದ್ದಪ್ಪ ಮತ್ತು ಜಯಶ್ರೀ ಆರಾಧ್ಯ ನಾಯಕಿ. ಚಿತ್ರದಲ್ಲಿ ವಿಕ್ರಾಂತ್‌, ಕಾವ್ಯ, ರಂಗಭೂಮಿ ಕಲಾವಿದ ಮಹದೇವಮೂರ್ತಿ, ಡಾ.ರಮಾಮಣಿ ನಟಿಸಿದ್ದಾರೆ. ನಿರ್ದೇಶಕ ಸಹದೇವ್‌ ರಚಿಸಿರುವ ಮೂರು ಗೀತೆಗಳಿಗೆ ಶ್ರೀಮಾನ್‌ ಗಂಧರ್ವ ಸಂಗೀತವಿದೆ. ಚಿತ್ರದ ಸೂಪರ್ ಟ್ರೈಲರ್ ವೀಕ್ಷಿಸಿ.

Back to Top