ಅಂಧರ ಕಥೆಯ “ರಾಗ” ಶುಕ್ರವಾರ ತೆರೆಗೆ; ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ
Team Udayavani, Apr 20, 2017, 6:45 PM IST
ಇದೇ ಮೊದಲ ಬಾರಿಗೆ ಹಾಸ್ಯ ನಟ ಮಿತ್ರ ಅವರು ಪ್ರಮುಖ ಪಾತ್ರದಲ್ಲಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಈ ಚಿತ್ರವನ್ನು ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದಾರೆ. ಮಿತ್ರ ಅವರಿಗೆ ಜೋಡಿಯಾಗಿ ಭಾಮಾ ನಟಿಸಿದ್ದಾರೆ. ಇದೊಂದು ಇಬ್ಬರು ಅಂಧರ ಕಥೆ. ಪ್ರೀತಿ, ಸೆಂಟಿಮೆಂಟ್, ಭಾವನಾತ್ಮಕ ಸಂಬಂಧಗಳ ಕುರಿತು ಹೆಣೆದ ಕಥೆ. ಅವಿನಾಶ್, ರಮೇಶ್ಭಟ್, ತಬಲಾನಾಣಿ, ಕಡ್ಡಿಪುಡಿ ಚಂದ್ರು, ರೂಪಿಕಾ ಸೇರಿದಂತೆ ಇತರರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.