CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸೋರುತಿಹುದು ಸೆಂಟ್ರಲ್‌ ರೈಲ್ವೇ ನಿಲ್ದಾಣದ ಛಾವಣಿ...!

ಭಾರತೀಯ ರೈಲ್ವೇ ಇಲಾಖೆ ಆಧುನಿಕತೆಯತ್ತ ಸಾಗಲು ದಾಪುಗಾಲಿಡುತ್ತಿರುವ ಹೊತ್ತಿನಲ್ಲಿಯೇ ನಮ್ಮ ದೇಶದ ವಿವಿಧ ಭಾಗಗಲ್ಲಿ ರೈಲ್ವೇ ನಿಲ್ದಾಣಗಳಲ್ಲಿನ ಅವ್ಯವಸ್ಥೆಯು ಈ ಇಲಾಖೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ದಕ್ಷಿಣ ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಅವ್ಯವಸ್ಥೆಯನ್ನು ನೀವೆ ನೋಡಿ. ಜೋರು ಮಳೆ ಬಂದಂತಹ ಸಂದರ್ಭಗಳಲ್ಲಿ ಇಲ್ಲಿನ ಫ್ಲ್ಯಾಟ್‌ ಫಾರ್ಮ್ನ ಛಾವಣಿ ಸೋರುತ್ತಿದ್ದು ನೀವು ನೆರವಾಗಿ ನಿಲ್ದಾಣದ ಗೋಡೆಗೆ ಬಿದ್ದು ಫ್ಲ್ಯಾಟ್‌ ಫಾರ್ಮ್ ನ ಮೇಲೆಯೇ ಹರಿಯುತ್ತಿದೆ. ಇದರಿಂದಾಗಿ, ವಯಸ್ಸಾದವರು, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಇಲ್ಲಿಂದ ಪ್ರಯಾಣಿಸುತ್ತಿರುವ ಸಾವಿರಾರು ಪ್ರಯಾಣಿಕರು ರೈಲ್ವೇಗೆ ಹಿಡಿಶಾಪ ಹಾಕುವಂತಾಗಿದೆ. ಇಷ್ಟು ಮಾತ್ರವಲ್ಲದೇ, ಮಳೆ ನೀರು ಸೋರುವ ಕಾರಣದಿಂದ ಇಲ್ಲಿ ಹಾಕಲಾಗಿರುವ ಬೆಂಚ್‌ ಗಳಲ್ಲಿಯೂ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇನ್ನಾದರು ಸಂಬಂದಪಟ್ಟವರು ಈ ಕುರಿತಾಗಿ ತುರ್ತು ಗಮನಹರಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ವಿಡಿಯೋ ಕೃಪೆ: ಅಶ್ವಿ‌ನ್‌ ಲಾರೆನ್ಸ್‌

Back to Top