“ರಾಧೆಯ ಜೊತೆ ರಾಜ’ನ ಲವ್: ವಿಭಿನ್ನ ಪ್ರೋಮೋ ವೀಕ್ಷಿಸಿ
Team Udayavani, Mar 12, 2018, 5:52 PM IST
ವಿಜಯರಾಘವೇಂದ್ರ ಅಭಿನಯದ “ರಾಜ ಲವ್ಸ್ ರಾಧೆ’ ಚಿತ್ರದ ಪ್ರೋಮೋ ಬಿಡುಗಡೆಯಾಗಿದ್ದು, ವಿಭಿನ್ನವಾದ ಪ್ರೇಮ ಕಥೆ, ಎಲ್ಲಾ ವರ್ಗದವರಿಗೂ ಹಾಗೂ ವಯೋಮಾನದವರಿಗೆ ಇಷ್ಟವಾಗುವಂತಹ ಕಥೆ ಮತ್ತು ಅದಕ್ಕೆ ಪೂರಕವಾಗಿರುವ ಸಂಭಾಷಣೆ ಪ್ರೋಮೋದಲ್ಲಿ ಎದ್ದು ಕಾಣುತ್ತದೆ. ಈ ಚಿತ್ರಕ್ಕೆ ರಾಜಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೆಚ್.ಎಲ್.ಎನ್. ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿಜಯರಾಘವೇಂದ್ರ ಜೋಡಿಯಾಗಿ ರಾಧಿಕಾ ಪ್ರೀತಿ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ಶುಭಾಪುಂಜಾ, ರವಿಶಂಕರ್, ರಾಕೇಶ್ ಅಡಿಗ, ತಬಲಾನಾಣಿ, ಶೋಭರಾಜ್, ಭವ್ಯಾ, ಮಿತ್ರ, ಪೆಟ್ರೋಲ್ ಪ್ರಸನ್ನ, ಮಜಾ ಟಾಕೀಸ್ ಪವನ್, ಪ್ರತಾಪ್, ಕುಡಿಬಾಂಡ್ ರಂಗತೇಜ, ಸುನೀಲ್, ಮೂಗು ಸುರೇಶ್, ಡ್ಯಾನಿ ಕುಟ್ಟಪ್ಪ, ನಿರಂಜನ್ ಕುಮಾರ್ ದಾವಣಗೆರೆ, ಮೋಹನ್ ಜುನೇಜ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಅವರ ಸಂಗೀತ ಮತ್ತು ವಿಜಯ್ ಭರಮಸಾಗರ ಅವರ ಸಂಭಾಷಣೆ ಹಾಗೂ ಒಂದು ಹಾಡು ಚಿತ್ರಕ್ಕಿದೆ. ಚಿತ್ರದ ವಿಭಿನ್ನ ಪ್ರೋಮೋ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ