CONNECT WITH US  

ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಿದ "ರಾಜಹಂಸ' ಚಿತ್ರದ ಟ್ರೈಲರ್‌ ವೀಕ್ಷಿಸಿ

ಜಡೇಶ್‌ಕುಮಾರ್‌ ನಿರ್ದೇಶನದ "ರಾಜಹಂಸ' ಚಿತ್ರದ ಟೀಸರ್‌ಗೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದೇ ತಡ, ಚಿತ್ರತಂಡ ಇದೀಗ ಹೊಸತನದ ಟ್ರೇಲರ್‌ವೊಂದನ್ನು ಬಿಟ್ಟಿದ್ದು, ಅದಕ್ಕೂ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ಈಗಿನ ಯೂತ್ಸ್ಗೆ ತಕ್ಕಂತಹ ಕಥೆವುಳ್ಳ ಈ ಚಿತ್ರದಲ್ಲಿ ಗೌರಿಶಿಖರ್‌ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ "ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಡಾ.ಶ್ರೀಧರ್‌, ಬಿ.ಸಿ ಪಾಟೀಲ್‌, ಯಮುನಾ, ರಾಜು ತಾಳಿಕೋಟೆ, ತಬಲಾನಾಣಿ, ಬುಲೆಟ್‌ ಪ್ರಕಾಶ್‌, ವಿಜಯ್‌ ಚಂಡೂರ್‌ ಇತರರು ನಟಿಸಿದ್ದಾರೆ. ಜನ ಮನ ಸಿನೆಮಾಸ್‌ ಬ್ಯಾನರ್‌ನಲ್ಲಿ ತಯಾರಾಗಿರುವ ಚಿತ್ರಕ್ಕೆ ಧನಂಜಯ್‌ ದಿಡಿಗ ಸಾಹಿತ್ಯ, ಸಂಭಾಷಣೆ ಬರೆದರೆ, ಆರೂರ್‌ ಸುಧಾಕರ್‌ ಕ್ಯಾಮೆರಾ ಹಿಡಿದಿದ್ದಾರೆ.  (Rajahamsa, Trailer, Gowrishikar, Ranjani Raghavan, dr. Sridhar)

Back to Top