CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

"ರಾಜರಥ'ದಲ್ಲಿ ಭಂಡಾರಿ ಸಹೋದರರು: ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ

"ರಂಗಿತರಂಗ' ಖ್ಯಾತಿಯ ಭಂಡಾರಿ ಸಹೋದರರ ಹೊಸ ಚಿತ್ರವಾದ "ರಾಜರಥ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಟೀಸರ್ ವೈರಲ್ ಆಗಿದೆ. ಚಿತ್ರದಲ್ಲಿ ತಮಿಳಿನ ಜನಪ್ರಿಯ ನಟ ಆರ್ಯ ಕೂಡಾ ಕಾಣಿಸಿಕೊಂಡಿದ್ದು ಚಿತ್ರದ ಮೇಲೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು "ರಾಜರಥ' ಚಿತ್ರದಲ್ಲಿ ನಿರೂಪ್‌ ಭಂಡಾರಿ, ಅವಂತಿಕಾ ಶೆಟ್ಟಿ, ರವಿಶಂಕರ್‌, ಶ್ರುತಿ ಹರಿಹರನ್‌, ಮುಂತಾದವರು ನಟಿಸುತ್ತಿದ್ದು, ಚಿತ್ರಕ್ಕೆ ಅನೂಪ್‌ ಭಂಡಾರಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ಸಂಗೀತವನ್ನೂ ಸಂಯೋಜಿಸಿದ್ದರು. ಚಿತ್ರವನ್ನು ಅಜಯ್‌ ರೆಡ್ಡಿ, ಅಂಜು ವಲ್ಲಭ್‌, ವಿಷ್ಣು ಡಾಕಪ್ಪಗರಿ, ಸತೀಶ್‌ ಶಾಸ್ತ್ರಿ ಮುಂತಾದವರು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.

Back to Top