ಇವರೇ “ರಂಗಾದ ಹುಡುಗರು’: ಡಬಲ್ ಮೀನಿಂಗ್ ಟ್ರೈಲರ್ ವೀಕ್ಷಿಸಿ
Team Udayavani, Dec 14, 2018, 3:12 PM IST
ಮನು ಹೆಗಡೆ ಸೇರಿದಂತೆ ಹೊಸ ಹುಡುಗರ “ರಂಗಾದ ಹುಡುಗರು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡಬಲ್ ಮೀನಿಂಗ್ನಿಂದ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಲ್ಲದೇ ತೇಜಸ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಮೂವರು ಉಂಡಾಡಿ ಗುಂಡರು ಕಡಿಮೆ ಅವಧಿಯಲ್ಲಿ ದುಡ್ಡು ಮಾಡುವುದು ಹೇಗೆ ಎಂದು ಯೋಚಿಸಿ, ಅಡ್ಡದಾರಿ ಹಿಡಿಯುವಂತಹ ಕಥೆ ಚಿತ್ರದಲ್ಲಿದೆ. ಬಸವರಾಜು ಚಿತ್ರಕ್ಕೆ ಬಂಡವಾಳ ಹೂಡಿದರೆ, ಸೀರೀಯಲ್ಗಳಿಗೆ ಸಂಭಾಷಣೆ ಬರೆದಿರುವ ರುದ್ರೇಶ್ ನಾಗಸಂದ್ರ ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ನಟ, ರಾಜಕಾರಣಿ ಸಿ.ಪಿ. ಯೋಗೇಶ್ವರ್ ಅವರ ಸಹೋದರಿ ಪುತ್ರ ಭರತ್ ಕೂಡ ಚಿತ್ರದಲ್ಲಿ ಈ ಹುಡುಗರಿಗೆ ರಂಗೇರಿಸುವ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ದಿಲ್ ಸೆ ದಿಲೀಪ್ ಅವರು ಬರೆದಿರುವ ಹಾಡುಗಳಿಗೆ ಪಳನಿರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಸಾಗರ್, ಮನುಹೆಗ್ಡೆ, ಸಂದೀಪ್, ಭರತ್ ವಿಕ್ರಂ ರಂಗಾದ ಹುಡುಗರಾಗಿದ್ದರೆ, ಜ್ಯೋತಿ, ಅಮಿತ್ಕುಲಾಲ್, ಶಾನ್ ಪೊನ್ನಮ್ಮ ಅವರು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಡಬಲ್ ಮೀನಿಂಗ್ ಟ್ರೈಲರ್ ವೀಕ್ಷಿಸಿ.