CONNECT WITH US  

ಪುನೀತ್‍ ಕಂಠದಲ್ಲಿ "ಮಿನ ಮಿನ': ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ

ಎಸ್‍ಎನ್‍ಎಸ್ ಸಿನಿಮಾಸ್ ಯುಎಸ್‍ಎ ಬ್ಯಾನರ್ ನಲ್ಲಿ ತಯಾರಾದಂತಹ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ಅಭಿನಯದ "ರತ್ನಮಂಜರಿ' ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿರುವ ನಡುವೆಯೇ, ಇತ್ತ ಚಿತ್ರತಂಡ ಚಿತ್ರದ "ಮಿನ ಮಿನ...' ಎಂಬ ಲಿರಿಕಲ್ ವಿಡಿಯೋ ಸಾಂಗನ್ನು ಬಿಡುಗಡೆ ಮಾಡಿದೆ. ಕೆ.ಕಲ್ಯಾಣ್ ಸಾಹಿತ್ಯ ಇರುವ ಈ ಹಾಡಿಗೆ ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಧ್ವನಿ ನೀಡಿದ್ದು, ಎನ್‍ಆರ್‍ಐ ಕನ್ನಡಿಗರ ಈ ಚಿತ್ರಕ್ಕೆ ಶುಭವನ್ನು ಕೂಡಾ ಕೋರಿದ್ದಾರೆ. ಅಲ್ಲದೇ ಯೂಟ್ಯೂಬ್‍ನಲ್ಲಿ 2 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ಈ ಹಾಡನ್ನು ವೀಕ್ಷಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ರತ್ನಮಂಜರಿ' ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಇದೊಂದು ಮರ್ಡರ್ ಮಿಸ್ಟರಿ ಕುರಿತ ಕಥಾಹಂದರವನ್ನೊಳಗೊಂಡಿದೆ. ನಾರ್ವೆಯಲ್ಲಿ ನೆಲೆಸಿರುವ ಕನ್ನಡಿಗ ಪ್ರಸಿದ್ಧ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕಾಗಿ ಮಡಿಕೇರಿಯಲ್ಲಿ ಇದುವರೆಗೆ ಕನ್ನಡದಲ್ಲಿ ಯಾರೂ ನೋಡಿರದ ರೀತಿಯಲ್ಲಿ ಮಳೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನಟರಾಜ್ ಹಳೇಬಿಡು, ಸಂದೀಪ್ ಬಂಡವಾಳ ಹೂಡಿದ್ದು, ಪವನ್ ರಾಮಿಸೆಟ್ಟಿ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ ಚಿತ್ರಕ್ಕಿದೆ. ರಾಜ್ ಚರಣ್ ನಾಯಕನಾಗಿ, ಅಖಿಲಾ ಪ್ರಕಾಶ್ ಮತ್ತು ಪಲ್ಲವಿ ರಾಜು ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ.

Back to Top