CONNECT WITH US  

ಮತ್ತೆ ಬಂದ "ಭೈರವ ಗೀತ': ಥ್ರಿಲ್ಲಿಂಗ್ ಟ್ರೈಲರ್ ವೀಕ್ಷಿಸಿ

"ಟಗರು' ಚಿತ್ರದಲ್ಲಿ ಧನಂಜಯ್‌ ಮಾಡಿದ ಡಾಲಿ ಪಾತ್ರವನ್ನು ತುಂಬಾನೇ ಮೆಚ್ಚಿದ್ದ ರಾಮ್‌ಗೋಪಾಲ್‌ ವರ್ಮಾ ಅವರಿಗಾಗಿ "ಭೈರವ ಗೀತ' ಚಿತ್ರವನ್ನು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಿಸುತ್ತಿದ್ದು, ಈ ಹಿಂದೆ ಚಿತ್ರತಂಡ ಫಸ್ಟ್ ಲುಕ್ ಮತ್ತು ಟ್ರೈಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿತ್ತು. ಅಲ್ಲದೇ ಧನಂಜಯ್ ಫಸ್ಟ್ ಲುಕ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 2.14 ನಿಮಿಷ ಹೊಂದಿರುವ ಟ್ರೈಲರ್, ಅದ್ಭುತವಾಗಿ ಮೂಡಿ ಬಂದಿದ್ದು. ಉತ್ತರ ಕರ್ನಾಟಕ ಸೊಗಡಿನ ಹೊಂದಿರುವ ದೃಶ್ಯ ಫುಲ್ ಥ್ರಿಲ್ಲಿಂಗ್ ಆಗಿದೆ. ಸಮಾಜದ ಮೇಲು, ಕೀಳಿನ ತಾರತಮ್ಯದ ಮಧ್ಯೆ ಚಿತ್ರದಲ್ಲಿ ಲವ್​ಸ್ಟೋರಿಯೊಂದನ್ನು ಕಾಣಬಹುದಾಗಿದೆ. ಟ್ರೈಲರ್​​ನಲ್ಲಿ ಧನಂಜಯ್​ ಆ್ಯಕ್ಷನ್​​ ಭರ್ಜರಿಯಾಗಿದ್ದು, ರಗಡ್​​ ಲುಕ್​​ನಲ್ಲಿ ಕಂಗೊಳಿಸಿದ್ದಾರೆ. ಇನ್ನು ಭೈರವ ಗೀತ' ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಒಟ್ಟಿಗೆ ತಯಾರಾಗುತ್ತಿದ್ದು, ಧನಂಜಯ್ ಎದುರಿಗೆ ನಾಯಕಿಯಾಗಿ ಐರಾ ಮೋರಾ ನಟಿಸಿದ್ದಾರೆ. ಭಾಸ್ಕರ್ ರಾಶಿ ಹಾಗೂ ರಾಮ್​​ಗೋಪಾಲ್ ವರ್ಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ರಾಮ್​​​ಗೋಪಾಲ್ ವರ್ಮಾ ಶಿಷ್ಯ ಸಿದ್ದಾರ್ಥ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಜಜೀವನದಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಇನ್ನು ಈ ಚಿತ್ರ ರಾಶಿ ಕಂಬೈನ್ಸ್‌ ಹಾಗೂ ಕಂಪೆನಿ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾಗಿದೆ. ಹೆಸರಿಗೆ ತಕ್ಕಂತೆ ಇದೊಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಪ್ರೀತಿಗಾಗಿ ಕ್ರೈಮ್‌ನತ್ತ ವಾಲುವ ಪ್ರೇಮಿಯೊಬ್ಬನ ಕಥೆಯನ್ನು ಹೊಂದಿದೆ. ಚಿತ್ರದ ಥ್ರಿಲ್ಲಿಂಗ್ ಟ್ರೈಲರ್ ವೀಕ್ಷಿಸಿ.

Back to Top