“ರಗಡ್’ ಲುಕ್ನಲ್ಲಿ ಮರಿ ಟೈಗರ್: ಆ್ಯಕ್ಷನ್ ಟೀಸರ್ ವೀಕ್ಷಿಸಿ
Team Udayavani, Jun 22, 2018, 4:47 PM IST
ಅಮ್ಮ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ “ರಗಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯಂಗ್ ಅಂಡ್ ಎನರ್ಜಿಟಿಕ್ ಆಗಿ ಪಕ್ಕಾ ಮಾಸ್ ಎಂಟ್ರಿ ಕೊಟ್ಟಿದ್ದಾರೆ ಮರಿ ಟೈಗರ್. ಅಲ್ಲದೇ ಭುಜದ ಮೇಲೆ ಆನೆ ಟ್ಯಾಟೂ ಹಾಕಿಸಿಕೊಂಡು, ಒಂದೇ ಉಸಿರಿನಲ್ಲಿ ಉದ್ದುದ್ದ ಡೈಲಾಗ್ ಹೊಡೆದಿದ್ದಾರೆ. ಇದೊಂದು ಪಕ್ಕಾ ಲವ್ ಮತ್ತು ಆ್ಯಕ್ಷನ್ ಚಿತ್ರವಾಗಿದ್ದು, ಪಾತ್ರಕ್ಕಾಗಿ 8 ಪ್ಯಾಕ್ ವರ್ಕೌಟ್ ಮಾಡಿದ್ದಾರೆ. ಇದಕ್ಕಾಗಿಯೇ 6 ತಿಂಗಳು ಉಪ್ಪು, ಖಾರ ಬಿಟ್ಟು ವರ್ಕೌಟ್ ಮಾಡಿದ್ದಲ್ಲದೇ, ಚಿತ್ರದಲ್ಲಿ ಆರಂಭದ ದೃಶ್ಯವೇ ಅಂಡರ್ ವಾಟರ್ನಲ್ಲಿ ಇರುವಂಥದ್ದು. ನೀರಲ್ಲಿ ಸುಮಾರು 30 ಸೆಕೆಂಡ್ಗಳ ಕಾಲ ಇರುವ ದೃಶ್ಯ ಬರುವ ಹಿನ್ನೆಲೆಯಲ್ಲಿ ವಿನೋದ್ ಪ್ರಭಾಕರ್, ತಾನೇ ಅಂಡರ್ವಾಟರ್ ನಲ್ಲಿ ಕುಳಿತುಕೊಳ್ಳುವುದಾಗಿ ನಿರ್ಧರಿಸಿ ಅಂಡರ್ ವಾಟರ್ನಲ್ಲೂ ಉಸಿರು ಗಟ್ಟಿ ಕೂರೋ ರಿಸ್ಕ್ ಸ್ಟಂಟ್ ಟ್ರೈ ಮಾಡಿದ್ದಾರೆ. ಇನ್ನು ವಿನೋದ್ ಪ್ರಭಾಕರ್ ಎದುರಿಗೆ ನಾಯಕಿಯಾಗಿ ಚೈತ್ರಾ ರೆಡ್ಡಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ದರ್ಶನ್ ಅವರ ಹಲವು ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಆ್ಯಕ್ಷನ್ ಕಟ್ ಹೇಳಿದ್ದು, ಅರುಣ್ ಕುಮಾರ್ ನಿರ್ಮಾಣ, ಅಭಿಮನ್ ರಾಯ್ ಸಂಗೀತ ಚಿತ್ರಕ್ಕಿದೆ. ಚಿತ್ರದ ಆ್ಯಕ್ಷನ್ ಟೀಸರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!