CONNECT WITH US  

ಬಾಲಿವುಡ್‍ನಲ್ಲಿ "ಸಂಜು' ಅಬ್ಬರ: ಕಮಾಲ್ ಟ್ರೈಲರ್ ವೀಕ್ಷಿಸಿ

ರಾಜ್ ಕುಮಾರ್ ಹಿರಾನಿ ನಿರ್ದೇಶನದ "ಸಂಜು' ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾವಾಗಿದ್ದು, ನಟ ಸಂಜಯ್ ದತ್ ಲೈಫ್ ಸ್ಟೋರಿ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗಿದೆ. ಮತ್ತೊಂದೆಡೆ ಸಂಜು ಆಗಿ ರಣಬೀರ್ ಕಪೂರ್ ಕಮಾಲ್ ಸೃಷ್ಟಿಸಿದ್ದಾರೆ. "ಸಂಜು' ಟ್ರೈಲರ್ ಬಿಡುಗಡೆಯಾದಾಗಿನಿಂದ ಇಲ್ಲಿವರೆಗೂ ನಾಲ್ಕು ಕೋಟಿಗೂ (42,541,098) ಹೆಚ್ಚು ವೀಕ್ಷಣೆಗೊಳಗಾಗಿ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಇನ್ನು ಟೀಸರ್​ನಲ್ಲಿ ಸಂಜಯ್​ ಜೀವನದ ಮಸಾಲೆ ತುಂಬಿದ ವಿಷಯಗಳನ್ನು ತೋರಿಸಲಾಗಿದೆ. ಜತೆಗೆ ಅವರಿಗಿದ್ದ ಮಾದಕ ವ್ಯಸನದ ಚಟಗಳು ಹಾಗೂ 300ಕ್ಕೂ ಹೆಚ್ಚು ಜನರೊಂದಿಗಿದ್ದ ದೈಹಿಕ ಸಂಬಂಧಗಳ ಬಗ್ಗೆ ತೋರಿಸಲಾಗಿದೆ. ಪೊಲೀಸ್​ ವಿಚಾರಣೆಯಿಂದ ಹಿಡಿದು ಜೈಲಿನಲ್ಲಿ ಕಳೆದ ಕರಾಳ ರಾತ್ರಿಗಳು, ಸಿನಿ ರಂಗದಲ್ಲಿ ತಾರೆಯಾಗಿದ್ದ ಸಂಜಯ್​ ಸಿನಿ ಜೀವನ ಹಾಳಾಗಿ ಮತ್ತೆ ಚಿಗುರೊಡೆಯುವ ಬಳ್ಳಿಯಂತೆ ಮೇಲೇಳುವ ಸಂಜಯ್​ ಬಗ್ಗೆ ಈ ಟ್ರೈಲರ್​ನಲ್ಲಿ ತೋರಿಸಲಾಗಿದೆ. ರಣಬೀರ್​ ಕಪೂರ್​ ಈ ಸಿನಿಮಾದಲ್ಲಿ ಯುವ ಸಂಜಯ್ ದತ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಸಂಜು ಆಗಿ ರಣಬೀರ್ ಕಪೂರ್, ಪರೇಶ್ ರಾವಲ್, ಮನೀಶಾ ಕೊಯಿರಾಲಾ, ಅನುಷ್ಕಾ ಶರ್ಮಾ, ಸೋನಂ ಕಪೂರ್, ದಿಯಾ ಮಿರ್ಜಾ, ವಿಕಿ ಕೌಶಲ್, ಬೋಮನ್ ಇರಾನಿ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದ ಕಮಾಲ್ ಟ್ರೈಲರ್ ವೀಕ್ಷಿಸಿ.

Back to Top