CONNECT WITH US  

ಇದೇ ರಿಷಬ್​ ಶೆಟ್ಟರ "ಸರ್ಕಾರಿ ಶಾಲೆ': ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ

"ಕಿರಿಕ್ ಪಾರ್ಟಿ' ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಿಷಬ್​ ಶೆಟ್ಟಿ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ' ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈಗಾಗಲೇ ಚಿತ್ರದ "ದಡ್ಡ ಪ್ರವೀಣ', "ಬಲೂನ್', ಹಾಗೂ "ಅರೆರೆ ಅವಳ ನಗುವ' ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಚಿತ್ರತಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್‍ನಲ್ಲಿ ಸಿನಿಪ್ರಿಯರ ಸಾಕಷ್ಟು ಮೆಚ್ಚುಗೆ ಗಳಿಸಿ, ವೈರಲ್ ಆಗಿದೆ. ಟ್ರೈಲರ್ ನ್ನು ಗಮನಿಸಿದಾಗ ಕಾಸರಗೋಡಿನಂತಹ ಗಡಿನಾಡು ಪ್ರದೇಶಗಳಲ್ಲಿ ಕನ್ನಡ ಶಾಲೆಗಳಿಗೆ ಬಂದಿರುವ ದುರಂತ ಪರಿಸ್ಥಿತಿ ಕುರಿತು ಹೇಳಲಾಗಿದ್ದು, ಕನ್ನಡ ಕಲಿಯಬೇಕೆಂಬ ಅಲ್ಲಿಯ ಮಕ್ಕಳ ಬಯಕೆ, ತಮ್ಮ ಭಾಷೆ ಹೇರಿಕೆಗೆ ಹಾತೊರೆಯುವ ಅಲ್ಲಿಯ ಸರ್ಕಾರದ ನಡೆ, ಹಾಗೂ ಇದರ ವಿರುದ್ಧ ಹೋರಾಟ ನಡೆಸುವ ಕನ್ನಡಿಗರ ಧೀರತನವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ರಿಷಬ್​ ಶೆಟ್ಟಿ ಮಾಡಿರುವುದು ಕಾಣಿಸುತ್ತದೆ. ಇನ್ನು ಚಿತ್ರಕ್ಕೆ "ರಾಮಾ ರಾಮಾ ರೇ' ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಇದೊಂದು ಕಾಸರಗೋಡು ಹಿನ್ನೆಲೆಯಲ್ಲಿ ಸಾಗುವ ಮಕ್ಕಳ ಚಿತ್ರ. ಅಲ್ಲದೇ ಮಕ್ಕಳ ಜೊತೆ ತಲೆಹರಟೆ ಮಾಡ್ಕೊಂಡು ಹಿರಿಯ ನಟ ಅನಂತ್‍ನಾಗ್ ಇಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೆಂಕಟೇಶ್‌ ಅಂಗುರಾಜ್‌ ಕ್ಯಾಮೆರಾ ಕೈಚಳಕವಿದ್ದು, ರಿಷಬ್​ ಪತ್ನಿ ಪ್ರಗತಿ ಶೆಟ್ಟಿ ಸಹ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಚಿತ್ರದ ವಿತರಣಾ ಹಕ್ಕನ್ನು ಜಯಣ್ಣ ಪಡೆದಿದ್ದಾರೆ. ಚಿತ್ರವು  ಇದೇ 23 ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಬ್ಯೂಟಿಫುಲ್ ಟ್ರೈಲರ್ ವೀಕ್ಷಿಸಿ.

Back to Top