CONNECT WITH US  

"ನಿನ್ನ ರಾಜ ನಾನು.. ನನ್ನ ರಾಣಿ ನೀನು': ಬ್ಯೂಟಿಫುಲ್‌ ಸಾಂಗ್ ವೀಕ್ಷಿಸಿ

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ "ಸೀತಾರಾಮ ಕಲ್ಯಾಣ' ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಸಾಂಗ್‍ವೊಂದನ್ನು ಬಿಡುಗಡೆ ಮಾಡಿದೆ. "ನಿನ್ನ ರಾಜ ನಾನು.. ನನ್ನ ರಾಣಿ ನೀನು' ಎಂಬ ಬ್ಯೂಟಿಫುಲ್‌ ಮೆಲೋಡಿ ಹಾಡು ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಮನ್ ಮಲ್ಲಿಕ್‌ ಧ್ವನಿಯಲ್ಲಿ ಮೂಡಿಬಂದಿರೋ ಈ ಹಾಡಿಗೆ ವಿ. ಸಾಯಿ ಸುಕನ್ಯ ಸಾಹಿತ್ಯವಿದ್ದು, ಅನೂಪ್‌ ರೂಬೀನ್ಸ್‌ ಸಂಗೀತ ಸಂಯೋಜನೆಯಿದೆ. ಅಲ್ಲದೇ ಹಾಡಿನ ಲಿರಿಕಲ್‌ ವಿಡಿಯೋದಲ್ಲಿ ನಿಖಿಲ್‌ ಕುಮಾರ್‌, ರಚಿತಾರಾಮ್‌ ಕೆಮಿಸ್ಟ್ರಿ ಭರ್ಜರಿಯಾಗಿ ಕಾಣುತ್ತಿದೆ. ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಛಾಯಾಗ್ರಹಣ, ಸುನೀಲ್‌ ಗೌಡ ಸಹ ನಿರ್ಮಾಣ, ಪ್ರಶಾಂತ್‌ ರಾಜಪ್ಪ, ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದ ಬ್ಯೂಟಿಫುಲ್‌ ಸಾಂಗ್ ವೀಕ್ಷಿಸಿ.

Back to Top