ಹಾಸ್ಯಭರಿತ ಸಿನಿಮಾ “ಸುರುಸುರ್ಬತ್ತಿ’ ಟ್ರೈಲರ್ ರಿಲೀಸ್
Team Udayavani, Nov 14, 2017, 6:03 PM IST
ಹಿರಿಯ ನಟಿ ಊರ್ವಶಿ ವಿಶೇಷ ಪಾತ್ರದಲ್ಲಿ ನಟಿಸಿರುವ “ಸುರುಸುರ್ಬತ್ತಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಲ್ಲಿ ನಗು ತರಿಸುತ್ತದೆ. ಇನ್ನು ಚಿತ್ರದಲ್ಲಿ ಆರವ್ (ಬಸವಟ್ಟಿ ಲೋಕೇಶ್) ಮತ್ತು ವೈಷ್ಣವಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯಾಗಿ ಊರ್ವಶಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಚಿತ್ರವನ್ನು ಕುಮಾರ್ ನಿರ್ಮಿಸಿದ್ದು, ಪೃಥ್ವಿರಾಜ್ ಕುಲಕರ್ಣಿ ಮತ್ತು ಲೋಕೇಶ್ ಸಂಗೀತ ಸಂಯೋಜಿಸಿದ್ದಾರೆ. ಎ.ಸಿ. ಮಹೇಂದರ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಮುಗಿಲ್ ನಿರ್ದೇಶನ ಚಿತ್ರಕ್ಕಿದೆ. ಹಾಸ್ಯಭರಿತ ಟ್ರೈಲರ್ ವೀಕ್ಷಿಸಿ.