“ಬಂತು ಬಂತು ಬಂತೂ… ಮದವೇರಿದ ಟಗರು’: ಮಾಸ್ ಸಾಂಗ್ ವೀಕ್ಷಿಸಿ
Team Udayavani, Apr 18, 2018, 4:18 PM IST
ಇತ್ತೀಚೆಗೆ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರ ಭರ್ಜರಿ ಪ್ರದರ್ಶನವಾಗುತ್ತಿದ್ದು, ಈಗಾಗಲೇ ಚಿತ್ರ ಹಾಗೂ ಚಿತ್ರದ ಹಾಡುಗಳು ಪ್ರೇಕ್ಷಕರಿಂದ ಬೊಂಬಾಟ್ ಮೆಚ್ಚುಗೆ ಗಳಿಸಿದ್ದು, ಈಗ “ಟಗರು 2′ ಚಿತ್ರದ ಪ್ರಮೋಷನಲ್ ಸಾಂಗ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೇನಪ್ಪಾ “ಟಗರು’ ಚಿತ್ರವೇ ಈಗಷ್ಟೇ ಬಿಡುಗಡೆಯಾಗಿದೆ. ಅಷ್ಟರಲ್ಲೇ “ಟಗರು 2′ ಚಿತ್ರ ಸೆಟ್ಟೇರುತ್ತಿದೆಯಾ ಎಂದು ಯೋಚಿಸುತ್ತಿದ್ದೀರಾ? ಹೌದು! ಶಿವರಾಜಕುಮಾರ್ ಅವರ ಅಭಿಮಾನಿಯಾದ ಗದಗ ಜಿಲ್ಲೆಯ ಶಿರಹಟ್ಟಿಯ ಮಾಚೇನಹಳ್ಳಿ ಗ್ರಾಮದ ಸತೀಶ ಕಮ್ಮಾರ ಎಂಬುವವರು “ಟಗರು 2′ ಚಿತ್ರಕ್ಕೆ ಪ್ರಮೋಷನಲ್ ಸಾಂಗ್ ಎಂಬ ಟೈಟಲ್ನಡಿ ಯೂಟ್ಯೂಬ್ನಲ್ಲಿ “ಬಂತು ಬಂತು ಬಂತೂ… ಮದವೇರಿದ ಟಗರು’ ಎಂಬ ಹಾಡನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಮಂಗಳೂರಿನ ಲಾಯ್ ವ್ಯಾಲೈಟೈನ್ ಸಲ್ಧಾನಾ ಸಂಗೀತವನ್ನು ನೀಡಿದ್ದು, ಹಾಡಿಗೆ ದನಿಯಾಗಿದ್ದಾರೆ. ಇನ್ನು ಸತೀಶ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನಲ್ಲಿ ಲಾಯ್ ವ್ಯಾಲೈಟೈನ್ ಅವರು ಜೋಶ್ನಲ್ಲಿ ಹಾಡುತ್ತಿರುವ ದೃಶ್ಯಗಳು ಹಾಗೂ “ಟಗರು’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರ ಆ್ಯಕ್ಷನ್ ದೃಶ್ಯಗಳು ಮತ್ತು ಹೊಡೆದಾಟವನ್ನು ಬಳಸಿಕೊಳ್ಳಲಾಗಿದೆ. ಅಲ್ಲದೇ ಶಿವಣ್ಣ ಈ ಹಾಡನ್ನು ಕೇಳುತ್ತಿರುವ ದೃಶ್ಯಗಳು ಸಹ ಇವೆ. ವಿಶೇಷ ಅಂದರೆ ಈ ಹಾಡನ್ನು “ಟಗರು’ ಸಿನಿಮಾ ಬಿಡುಗಡೆಯಾದ ಮರುದಿನವೇ ಸತೀಶ್ ಹಾಗೂ ಲಾಯ್ ಈ ಹಾಡನ್ನು ಯುಟ್ಯೂಬ್ನಲ್ಲಿ ಹರಿಬಿಟ್ಟಿದ್ದು, ಇಲ್ಲಿಯವರೆಗೂ ಈ ಹಾಡನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಪ್ರಮೋಷನಲ್ ಮಾಸ್ ಸಾಂಗ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ