“ಹೃದಯಕೆ ಹೆದರಿಕೆ ಹೀಗೆ ನೋಡಿದರೆ’: ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ
Team Udayavani, Sep 16, 2018, 2:26 PM IST
ಶಶಾಂಕ್ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್ ಮತ್ತು ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಹೃದಯಕೆ ಹೆದರಿಕೆ ಹೀಗೆ ನೋಡಿದರೆ’ ಎಂಬ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದೆ. ಜಯಂತ್ ಕಾಯ್ಕಿಣಿ ಬರೆದಿರುವ ಪದಗಳಿಗೆ ಜ್ಯೂಡಾ ಸ್ಯಾಂಡಿ ಕ್ಯಾಚೀ ಟ್ಯೂನ್ಸ್ ಹಾಕಿದ್ದು, ಸರಿಗಮಪ ಖ್ಯಾತಿಯ ಸಂಜಿತ್ ಹೆಗ್ಡೆ ಹಾಗೂ ಸಂಗೀತ ರವೀಂದ್ರನಾಥ್ ಅವರು ಧ್ವನಿ ನೀಡಿದ್ದು ಕೇಳುಗರಲ್ಲಿ ಹೊಸ ಭಾವನೆಯನ್ನು ಮೂಡಿಸುತ್ತಿದೆ. ಅಜೇಯ್ ರಾವ್ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ “ತಾಯಿಗೆ ತಕ್ಕ ಮಗ’ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಸಿನಿಪ್ರಿಯರಿಂದ ಸಖತ್ ಮೆಚ್ಚುಗೆ ಪಡೆದುಕೊಂಡಿತ್ತು. ಚಿತ್ರ ಶಶಾಂಕ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಜೇಯ್ರಾವ್ ಹಾಗೂ ನಾಯಕಿ ಆಶಿಕಾ ರಂಗನಾಥ್ ನಡುವಿನ ರೊಮ್ಯಾಟಿಂಕ್ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿರುವ ಈ ಹಾಡು ಕುತೂಹಲ ಮೂಡಿಸುತ್ತಿದೆ. ಚಿತ್ರದ ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್