“ತಾಯಿಗೆ ತಕ್ಕ ಮಗ’ನಾಗಿ ಅಜೇಯ್: ಬೊಂಬಾಟ್ ಟೀಸರ್ ವೀಕ್ಷಿಸಿ
Team Udayavani, Aug 28, 2018, 4:16 PM IST
ಶಶಾಂಕ್ ನಿರ್ದೇಶನದ “ತಾಯಿಗೆ ತಕ್ಕ ಮಗ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರಗಡ್ ಲುಕ್ನಲ್ಲಿ ಅಜೇಯ್ ರಾವ್ ಮಿಂಚಿದ್ದಾರೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿರುವ “ತಾಯಿಗೆ ತಕ್ಕ ಮಗ’ ಅಕ್ಟೋಬರ್ನಲ್ಲಿ ತೆರೆಗೆ ಬರಲಿದೆ. ಚಿತ್ರವು ಎರಡು ಟ್ರ್ಯಾಕ್ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್ ಒಂದು ಕಡೆಯಾದರೆ, ಹೀರೋ ಲವ್ ಎಪಿಸೋಡ್ ಇನ್ನೊಂದು ಕಡೆ ಸಾಗುತ್ತದೆಯಂತೆ. “ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೊಂದು ಕಥೆ ಇದೆ. ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ’ಯಲ್ಲಿ ಕಥೆ ಸಾಗುತ್ತದೆ. ಚಿತ್ರದಲ್ಲಿ ಅಜೇಯ್ ರಾವ್ ಎದುರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದು, ಸುಮಲತಾ ಅಂಬರೀಶ್ ತಾಯಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಶಶಾಂಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅಲ್ಲದೇ ಚಿತ್ರಕ್ಕೆ ಕಿಚ್ಚ ಸುದೀಪ ಧ್ವನಿ ನೀಡಿದ್ದು, ಈ ಮೂಲಕ ಅಜೇಯ್ ರಾವ್ ಸಿನಿಮಾಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದ ಬೊಂಬಾಟ್ ಟೀಸರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Mumbai Indians: ಸೂರ್ಯಕುಮಾರ್ ಶೀಘ್ರ ಚೇತರಿಕೆ ಸಾಧ್ಯತೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್