CONNECT WITH US  

"ಟ್ರಂಕ್' ತೆಗೆದೀರಿ ಹುಷಾರ್!: ಹಾರರ್ ಟ್ರೈಲರ್ ವೀಕ್ಷಿಸಿ

ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯ ಚಿತ್ರಣ ಹೊಂದಿರುವ "ಟ್ರಂಕ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಿಗೆ ಹೊಸ ಫೀಲ್‌ ಕೊಡುವಂತಿದೆ. ಅಲ್ಲದೇ ಇದೊಂದು ಮನೆಯೊಂದರಲ್ಲಿ ನಡೆದ ಘಟನೆಯಾಧರಿತ ಚಿತ್ರವಾಗಿದ್ದು, ಒಂದು ಟ್ರಂಕ್‌ನಿಂದ ಶುರುವಾಗಿ ಟ್ರಂಕ್‌ ಸುತ್ತ ನಡೆಯೋ ಘಟನೆಗಳೇ ಚಿತ್ರದ ಜೀವಾಳವಾಗಿದೆ. ಇನ್ನು ಚಿತ್ರವನ್ನು ಹಿರಿಯ ನಿರ್ದೇಶಕ, ನಿರ್ಮಾಪಕ ದಿವಂಗತ ಜಿ.ವಿ.ಅಯ್ಯರ್‌ ಅವರ ಮೊಮ್ಮಗಳು ರಿಷಿಕಾ ಶರ್ಮ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಿಹಾಲ್‌ ನಾಯಕನಾದರೆ, ವೈಶಾಲಿ ನಾಯಕಿ. ಉಳಿದಂತೆ ಅರುಣ ಬಾಲರಾಜ್‌, ರಂಗಭೂಮಿಯ ಹಿರಿಯ ಕಲಾವಿದೆ ಸುಂದರಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ರಾಜೇಶ್‌ ಭಟ್‌ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾರರ್ ಟ್ರೈಲರ್ ವೀಕ್ಷಿಸಿ.

Back to Top