CONNECT WITH US  

ಮಂಗಳೂರಿನಲ್ಲಿ ಪತ್ತನಾಜೆ ಪ್ರೀಮಿಯರ್‌ ಶೋ ಉದ್ಘಾಟನೆ

ತುಳುನಾಡಿನ ಜನಜೀವನ ಹಾಗೂ ನಂಬಿಕೆ ಆಚರಣೆಗಳ ಕುರಿತಂತೆ ನಿರ್ಮಾಣವಾದ ಪತ್ತನಾಜೆ ಚಿತ್ರ ತುಳು ಚಿತ್ರರಂಗದಲ್ಲಿ ಹೊಸ ಮನ್ವಂತರವನ್ನು ದಾಖಲಿಸುವಂತಾಗಲಿ ಎಂದು ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದರು. ಸೆ.1ರಂದು ಕರಾವಳಿಯಾದ್ಯಂತ ತೆರೆಕಾಣಲಿರುವ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿಯವರ ಕಲಾಜಗತ್ತು ಕ್ರಿಯೇಷನ್ಸ್‌ ಲಾಂಛನ ದಲ್ಲಿ ನಿರ್ಮಾಣವಾದ 'ಪತ್ತನಾಜೆ' ಚಿತ್ರದ ನಗರದ ಬಿಗ್‌ಸಿನೆಮಾದಲ್ಲಿ ಗುರುವಾರ ನಡೆದ  ಪ್ರಿಮಿಯರ್‌ ಶೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಚಿತ್ರನಟ ರಾಮಕೃಷ್ಣ ಮಾತನಾಡಿ, ಪ್ರಸ್ತುತ ತುಳು ಭಾಷೆಯಲ್ಲಿ ಅದ್ಭುತ ಚಿತ್ರಗಳು ತೆರೆ ಕಾಣುತ್ತಿವೆ. ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ತುಳುಚಿತ್ರಗಳ ಸಾಲಿಗೆ ಪತ್ತನಾಜೆಯೂ ಸೇರ್ಪಡೆಗೊಳ್ಳಲಿ. ಈ ಮೂಲಕ ಜಗತ್ತಿನಾದ್ಯಂತ ತುಳು ಭಾಷೆಯ ಚಿತ್ರಗಳು ಪಸರಿಸಲಿ. ಚಿತ್ರವು ಯಶಸ್ವಿಯಾಗಲಿ ಎಂದರು.

Back to Top