CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವೇಶ್ಯಾವಾಟಿಕೆ ಕರಾಳಮುಖದ ಕುರಿತ ಚಿತ್ರ "ಉರ್ವಿ' ಈ ವಾರ ತೆರೆಗೆ

ಶ್ರದ್ಧಾ ಶ್ರೀನಾಥ್‌, ಶ್ರುತಿ ಹರಿಹರನ್‌ ಮತ್ತು ಶ್ವೇತಾ ಪಂಡಿತ್‌ ಒಟ್ಟಾಗಿ ಅಭಿನಯಿಸಿರುವ "ಉರ್ವಿ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ಕಲಾವಿದ ಬಿ.ಕೆ.ಎಸ್‌ ವರ್ಮ ಅವರ ಪುತ್ರ ಪ್ರದೀಪ್‌ ವರ್ಮ ನಿರ್ದೇಶನದ "ಉರ್ವಿ' ಚಿತ್ರವು ವೇಶ್ಯಾವಟಿಕೆಯ ಕರಾಳ ಮುಖದ ಕುರಿತಾಗಿದ್ದು, ಈ ಚಿತ್ರವನ್ನು ಬಿ.ಆರ್‌.ಪಿ. ಭಟ್‌ ಎನ್ನುವವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ಭವಾನಿ ಪ್ರಕಾಶ್‌, ವಾಸುಕಿ ವೈಭವ್‌, ಅನನ್ಯ ಭಟ್‌ ಮುಂತಾದ ಹಲವು ಕಲಾವಿದರು ನಟಿಸಿದ್ದು, ಮನೋಜ್‌ ಜಾರ್ಜ್‌ ಅವರ ಸಂಗೀತ ಮತ್ತು ಆನಂದ್‌ ಸುಂದರೇಶ್‌ ಅವರ ಛಾಯಾಗ್ರಹಣವಿದೆ. (URVI - Official Trailer with Eng Subs | Sruthi Hariharan, Shraddha Srinath, Shweta Pandit)

Back to Top