ಪವರ್ ಸ್ಟಾರ್ ಕಂಠದಲ್ಲಿ "ರಂಗೇರಿದೆ': ಬ್ಯೂಟಿಫುಲ್ ಲಿರಿಕ್ ಸಾಂಗ್ ವೀಕ್ಷಿಸಿ | Udayavani - ಉದಯವಾಣಿ
   CONNECT WITH US  
echo "sudina logo";

ಪವರ್ ಸ್ಟಾರ್ ಕಂಠದಲ್ಲಿ "ರಂಗೇರಿದೆ': ಬ್ಯೂಟಿಫುಲ್ ಲಿರಿಕ್ ಸಾಂಗ್ ವೀಕ್ಷಿಸಿ

"ಅಕಿರ' ಸಿನಿಮಾದ ಬಳಿಕ ಅನೀಶ್‌ ತೇಜೆಶ್ವರ್‌ ಅಭಿನಯದ "ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್ ‌ಬಿಡುಗಡೆಯಾಗಿ ಕಮರ್ಷಿಯಲ್‌ ಡೈಲಾಗ್‍ಗಳ ಮೂಲಕ ಸುದ್ದಿ ಮಾಡಿತ್ತು. ಈಗ ಆ ಚಿತ್ರಕ್ಕೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದಾರೆ. ಪುನೀತ್‌ರಾಜ್‌ಕುಮಾರ್‌ ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ, ಇದರಲ್ಲೇನು ವಿಶೇಷ ಎಂದರೆ, ಅಪ್ಪು ಈ ಚಿತ್ರಕ್ಕೆ "ರಂಗೇರಿದೆ ಈ ಮನಸಿನ ಬೀದಿ' ಎಂಬ ರೊಮ್ಯಾಂಟಿಕ್‌ ಸಾಂಗ್‌ ಹಾಡಿದ್ದಾರೆ. ಕಿರಣ್ ಕಾವೇರಪ್ಪ ಬರೆದಿರುವ ಸಾಹಿತ್ಯಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಕಮರ್ಷಿಯಲ್‌ ಡೈಲಾಗ್ ಗಳ ಮೂಲಕ ಟೀಸರ್‌ನ್ನು ಸೆಳೆಯುವಂತೆ ಮಾಡಿದ್ದ ಅನಿಶ್‌ ಮತ್ತವರ ತಂಡ ಈಗ ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್‌ ಅವರ ಕೈಯಲ್ಲಿ ಹಾಡಿಸಿದೆ. ಇನ್ನು "ವಾಸು ನಾನ್‌ ಪಕ್ಕಾ ಕಮರ್ಷಿಯಲ್‌' ಚಿತ್ರವನ್ನು ಅನಿಶ್‌ ಅವರೇ ಸ್ವತಃ ನಿರ್ಮಾಣ ಮಾಡುತ್ತಿದ್ದು, ಅಜಿತ್‌ ವಾಸನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಶ್ವಿ‌ಕಾ ನಾಯ್ಡು ನಾಯಕಿ. ಅಲ್ಲದೇ ಚಿತ್ರತಂಡ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಪವರ್ ಸ್ಟಾರ್ ಜೊತೆಯಲ್ಲಿ ಸಿ ಆರ್ ಬಾಬಿ ಕೂಡ ಹಾಡಿಗೆ ಧ್ವನಿಯಾಗಿದ್ದಾರೆ. ಬ್ಯೂಟಿಫುಲ್ ಲಿರಿಕ್ ಸಾಂಗ್ ವೀಕ್ಷಿಸಿ.

Back to Top