ಕಮರ್ಷಿಯಲ್ ವಾಸು ಹೇಳಿದ್ರು “ಹೇಳುಬಾ ಏನಾದೆನಾ’: ಫೀಲಿಂಗ್ ಸಾಂಗ್ ವೀಕ್ಷಿಸಿ
Team Udayavani, Jun 2, 2018, 5:20 PM IST
“ಅಕಿರ’ ಸಿನಿಮಾದ ಬಳಿಕ ಅನೀಶ್ ತೇಜೆಶ್ವರ್ ಅಭಿನಯದ “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಕಮರ್ಷಿಯಲ್ ಡೈಲಾಗ್ಗಳ ಮೂಲಕ ಸುದ್ದಿ ಮಾಡಿತ್ತು. ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಂಠದಲ್ಲಿ “ರಂಗೇರಿದೆ ಈ ಮನಸಿನ ಬೀದಿ’ ಹಾಡು ಹಿಟ್ ಆಗಿತ್ತು. ಇದೀಗ ಚಿತ್ರದ ಮತ್ತೊಂದು “ಹೇಳುಬಾ ಏನಾದೆನಾ ಯಾಕಿತರಾ ಕಳೆದೋದೆನಾ’ ಎಂಬ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಹಾಡಿಗೆ ಅಜನೀಶ್ ಲೋಕನಾಥ್ ಧ್ವನಿ ನೀಡಿದ್ದು, ಅವರೇ ಸಂಗೀತ ಸಂಯೋಜಿಸಿದ್ದಾರೆ. ಹಾಡಿಗೆ ಹರಿ ಸಂತೋಷ್ ಸಾಹಿತ್ಯ ಬರೆದಿದ್ದಾರೆ. ಇನ್ನು “ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವನ್ನು ಅನಿಶ್ ಅವರೇ ಸ್ವತಃ ನಿರ್ಮಾಣ ಮಾಡುತ್ತಿದ್ದು, ಅಜಿತ್ ವಾಸನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ. ಚಿತ್ರದ ಫೀಲಿಂಗ್ ಲಿರಿಕಲ್ ಸಾಂಗ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್