"ವೆನಿಲ್ಲಾ'ದಲ್ಲಿ ಕ್ಯಾಪ್ನೋ ಫೋಬಿಯಾ: ಮರ್ಡರ್‌ ಮಿಸ್ಟ್ರಿ ಟ್ರೈಲರ್‌ ವೀಕ್ಷಿಸಿ | Udayavani - ಉದಯವಾಣಿ
   CONNECT WITH US  
echo "sudina logo";

"ವೆನಿಲ್ಲಾ'ದಲ್ಲಿ ಕ್ಯಾಪ್ನೋ ಫೋಬಿಯಾ: ಮರ್ಡರ್‌ ಮಿಸ್ಟ್ರಿ ಟ್ರೈಲರ್‌ ವೀಕ್ಷಿಸಿ

ಜಯತೀರ್ಥ ನಿರ್ದೇಶನದ "ವೆನಿಲ್ಲಾ' ಚಿತ್ರದ ಟ್ರೈಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಅವಿನಾಶ್‌ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸುತ್ತಿದ್ದಾರೆ. ಚಿತ್ರದಲ್ಲಿ ಸ್ವಾತಿ ಕೊಂಡೆ ನಾಯಕಿಯಾಗಿ ನಟಿಸಿದ್ದಾರೆ. "ವೆನಿಲ್ಲಾ' ಒಂದು ಮರ್ಡರ್‌ ಮಿಸ್ಟ್ರಿ ಚಿತ್ರ. ಇಡೀ ಸಿನಿಮಾ ಒಂದು ಕೊಲೆಯ ಸುತ್ತ ನಡೆಯುತ್ತದೆ. ಕ್ಯಾಪ್ನೋ ಫೋಬಿಯಾ ಎಂಬ ಕಾಯಿಲೆಗೂ ಇದಕ್ಕೂ ಸಂಬಂಧವಿದೆ. ಕ್ಯಾಪ್ನೋ ಫೋಬಿಯಾ ಇರುವವರಿಗೆ ಹೊಗೆ ನೋಡಿದರೆ ಭಯ ಆಗುತ್ತದೆ. ಈ ಚಿತ್ರಕ್ಕೂ ಆ ಫೋಬಿಯಾಗೂ ಸಂಬಂಧವಿದೆಯಂತೆ. ಈ ಚಿತ್ರವನ್ನು ನಾಯಕ ಅವಿನಾಶ್‌ ಅವರ ತಂದೆ ಜಯರಾಂ ನಿರ್ಮಿಸಿದ್ದಾರೆ. ಚಿತ್ರಕ್ಕೆ ಭರತ್‌ ಬಿ.ಜೆ. ಸಂಗೀತವಿದೆ. ಚಿತ್ರದಲ್ಲಿ ರವಿಶಂಕರ್‌ ಗೌಡ, ರೆಹಮಾನ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದ ಮರ್ಡರ್‌ ಮಿಸ್ಟ್ರಿ ಟ್ರೈಲರ್‌ ವೀಕ್ಷಿಸಿ.

Back to Top