"ಐ ಆ್ಯಮ್ ದಿ ವಿಲನ್' ಅಂದ್ರು ಶಿವಣ್ಣ-ಸುದೀಪ್: ಭರ್ಜರಿ ಸಾಂಗ್ ವೀಕ್ಷಿಸಿ
ಪ್ರೇಮ್ ನಿರ್ದೇಶನದ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ "ದಿ ವಿಲನ್' ಚಿತ್ರದ "ಮಚ್ಚು ಗಿಚ್ಚು ಹಿಡಿದವನಲ್ಲ, ಆದ್ರೂ ಹವಾ ಇಟ್ಟವನಲ್ಲ' ಹಾಡಿನ ಲಿರಿಕಲ್ ವಿಡಿಯೊ ಸಾಂಗ್ ಶನಿವಾರ ಸಾಮಾಜಿಕ ಜಾಲತಾಣ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಸಕತ್ ಹವಾ ಕ್ರಿಯೇಟ್ ಮಾಡಿದೆ. ಪ್ರೇಮ್ ಸಾಹಿತ್ಯವಿರುವ ಈ ಹಾಡಿಗೆ ಶಂಕರ್ ಮಹಾದೇವನ್ ಮತ್ತು ಬಸ್ರು ಧ್ವನಿ ನೀಡಿದ್ದರೆ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಲ್ಲದೇ ಬಿಡುಗಡೆಯಾದ ಕೆಲ ಗಂಟೆಗಳಲ್ಲೇ 2.89 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಲಿರಿಕಲ್ನಲ್ಲಿ ಹಾಡಿನ ಸಾಹಿತ್ಯದ ಜೊತೆಗೆ ಸಿನಿಮಾ ಚಿತ್ರಿಕರಣದ ದೃಶ್ಯಗಳನ್ನು ಕಾಣಬಹುದಾಗಿದ್ದು, ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ಈ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಸಿ.ಆರ್. ಮನೋಹರ್ ತಮ್ಮ ತನ್ವಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿದ್ದು, ಗಿರೀಶ್ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶಿವರಾಜಕುಮಾರ್, ಸುದೀಪ್, ಶ್ರುತಿ ಹರಿಹರನ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ ಭರ್ಜರಿ ಸಾಂಗ್ ವೀಕ್ಷಿಸಿ.