CONNECT WITH US  

ಮುಂಜಾನೆ ಮೂಡಲ್ಲಿ "ಯಜಮಾನ': ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ "ಯಜಮಾನ' ಸಿನಿಮಾದ "ಶಿವನಂದಿ' ಲಿರಿಕಲ್ ಹಾಡು ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿತ್ತು. ಇದೀಗ ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಲಿರಿಕಲ್ ಹಾಡು ರಿಲೀಸ್ ಆಗಿದೆ. ಹೌದು, "ಒಂದು ಮುಂಜಾನೆ' ಎಂಬ ಹೊಸ ಹಾಡು ಬಿಡುಗಡೆಯಾಗಿದ್ದು, ದರ್ಶನ್ ಮತ್ತು ರಶ್ಮಿಕಾ ಜೋಡಿಯ ಡ್ಯುಯೆಟ್ ಹಾಡು ಇದಾಗಿದೆ. ಅಲ್ಲದೇ ಸ್ವೀಡನ್‍ನಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಸಂಪೂರ್ಣ ಹಾಡಿನಲ್ಲಿ ದರ್ಶನ್ ಮತ್ತು ರಶ್ಮಿಕಾ ಇಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಕಾಣಬಹುದಾಗಿದ್ದು, ಇಬ್ಬರ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೋಡಬಹುದಾಗಿದೆ. ಇನ್ನು ಈ ಹಾಡನ್ನು ಪ್ರೇಮಕವಿ ಕವಿರಾಜ್ ಬರೆದಿದ್ದು, ಸೋನು ನಿಗಮ್​ ಹಾಗೂ ಶ್ರೇಯಾ ಘೋಷಾಲ್​ ಧ್ವನಿಯಾಗಿದ್ದಾರೆ. ವಿ. ಹರಿಕೃಷ್ಣ ಟ್ಯೂನ್ ಹಾಕಿರುವ ಈ ಸಾಂಗ್​​ ಕೇವಲ ಅರ್ಧಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಚಿತ್ರದ ರೋಮ್ಯಾಂಟಿಕ್ ಸಾಂಗ್ ವೀಕ್ಷಿಸಿ.

Back to Top