ದರ್ಶನ್ “ಯಜಮಾನ’ನಿಗೆ ಧ್ರುವಸರ್ಜಾ ಧ್ವನಿ: ಬೊಂಬಾಟ್ ಫಸ್ಟ್ ಲುಕ್ ವೀಕ್ಷಿಸಿ
Team Udayavani, Feb 17, 2018, 2:47 PM IST
ಧ್ರುವ ಸರ್ಜಾ ನಾಯಕರಾಗಿರುವ “ಭರ್ಜರಿ’ ಚಿತ್ರಕ್ಕೆ ದರ್ಶನ್ ಹಿನ್ನೆಲೆ ಧ್ವನಿ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಧ್ರುವ, ದರ್ಶನ್ ಅವರ ಹೊಸ ಚಿತ್ರವೊಂದಕ್ಕೆ ಧ್ವನಿ ನೀಡಿದ್ದಾರೆ. ಕಳೆದ ತಿಂಗಳು ಮುಹೂರ್ತವಾದ ದರ್ಶನ್ ಅಭಿನಯದ “ಯಜಮಾನ’ ಚಿತ್ರದ ಟೀಸರ್ಗೆ ಧ್ರುವ ಧ್ವನಿ ನೀಡಿರುವುದು ವಿಶೇಷ. “ಯಜಮಾನ’ ಚಿತ್ರವನ್ನು ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಿಸುತ್ತಿದ್ದು, ಪಿ.ಕುಮಾರ್ ಈ ಸಿನಿಮಾದ ನಿರ್ದೇಶಕರು. ಚಿತ್ರದಲ್ಲಿ ದರ್ಶನ್ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಫೆವ್ರವರಿ 19ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ,”ಬಹದ್ದೂರ್’ ಚೇತನ್ ಸಂಭಾಷಣೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣವಿದೆ. ಚಿತ್ರದಲ್ಲಿ ರವಿಶಂಕರ್, ದೇವರಾಜ್, ಧನಂಜಯ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಶುಕ್ರವಾರ ದರ್ಶನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಟೀಸರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಚಿತ್ರದ ಬೊಂಬಾಟ್ ಫಸ್ಟ್ ಲುಕ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ