ಹುಟ್ಟು ಸಾವಿನ ನಡುವೆ “ಯಾರ್ ಯಾರೋ ಗೋರಿ ಮೇಲೆ …’: ಸಸ್ಪೆನ್ಸ್ ಟ್ರೈಲರ್ ವೀಕ್ಷಿಸಿ
Team Udayavani, Apr 13, 2018, 2:46 PM IST
ತ್ರಿಕೋನ ಪ್ರೇಮಕಥೆ, ಪಕ್ಕಾ ರಾ ಲವ್ ಸಬ್ಜೆಕ್ಟ್ ಚಿತ್ರ “ಯಾರ್ ಯಾರೋ ಗೋರಿ ಮೇಲೆ …’ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಪಕ್ಕಾ ಯುವಕರಿಗೆ ಸಂಬಂಧಿಸಿದ ಚಿತ್ರ. ಹಳ್ಳಿಯಿಂದ ಸಿಟಿಗೆ ಬರುವ ಹುಡುಗರಿಬ್ಬರು ಆ ಸಿಟಿಯಲ್ಲಿ ಯಾವ ರೀತಿ ಸಮಸ್ಯೆ ಎದುರಿಸುತ್ತಾರೆ. ಕೆಲ ಸಮಸ್ಯೆಯಿಂದ ಹೇಗೆ ಹೊರಬರುತ್ತಾರೆ ಎಂಬ ಅಂಶ ಚಿತ್ರದ ಹೈಲೈಟ್. ಇಡೀ ಚಿತ್ರದ ಕಥೆ ಇಬ್ಬರು ನಾಯಕರ ಸುತ್ತ ನಡೆಯಲಿದೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ನಲ್ಲಿ ಸಾಗುವ ಸಿನಿಮಾ ಹಾಗೂ ಹುಟ್ಟು ಸಾವಿನ ನಡುವೆ ಸಮಯ ಎಂಬುದು ಮನುಷ್ಯನ್ನು ಹೇಗೆಲ್ಲಾ ಆಡಿಸುತ್ತದೆ ಎಂಬುದನ್ನಿಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆಯಂತೆ. ರಾಘುಚಂದ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆಯ ಜವಾಬ್ದಾರಿಯೂ ಇವರದೇ. ಚಿತ್ರಕ್ಕೆ ಅಭಿ ಮತ್ತು ರಾಜ್ ಇಬ್ಬರು ನಾಯಕರು. ಈ ಪೈಕಿ ರಾಜ್ ಅವರು ಅಭಿನಯದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರಂತೆ. ಇನ್ನು, ವರ್ಷಾ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಲೋಕಿ ಅವರು ಸಂಗೀತ ನೀಡಿದ್ದಾರೆ. ವಿನು ಮನಸು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರದೀಪ್ ಗಾಂಧಿ ಚಿತ್ರದ ಛಾಯಾಗ್ರಾಹಕರು. ಚಿತ್ರದ ಸಸ್ಪೆನ್ಸ್ ಟ್ರೈಲರ್ ವೀಕ್ಷಿಸಿ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ