CONNECT WITH US  

"ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ': ಭಟ್ರು ಸಾಂಗ್ ವೀಕ್ಷಿಸಿ

ಸಮಕಾಲೀನ ಸಂಗತಿಗಳ ಬಗ್ಗೆ ಯೋಗರಾಜ್‌ ಭಟ್ರು ಹಾಡುಗಳನ್ನ ಬರೀತಾಲೇ ಇರುತ್ತಾರೆ. ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಾಗಿ ವೋಟು ಹಾಕಿ ಎಂಬ ವಿಷಯವನ್ನಿಟ್ಟುಕೊಂಡು ಚುನಾವಣಾ ಆಯೋಗಕ್ಕೆ ಒಂದು ಹಾಡನ್ನು ಮಾಡಿಕೊಟ್ಟಿದ್ದಾರೆ. ಇದಲ್ಲದೆ ತಮ್ಮ "ಪಂಚತಂತ್ರ' ತಂಡದಿಂದ "ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ, ಹಂಗಂತ ಸುಮ್ನೆ ಕುಂತ್ರೆ ತಪ್ಪಾಗ್ತದಲ್ಲ, ಯಾರನ್ನ ಕಂಡ್ರೂ ನಮ್ಗೆ ಸೆಟ್ಟಾಗ್ತಾ ಇಲ್ಲ, ಹಾಳೂರಿಗುಳಿದವ್ನ್ ಯಾರೋ ಗೊತ್ತಾಗ್ತಾ ಇಲ್ಲ ...' ಎಂಬ ಎಲೆಕ್ಷನ್‌ ಹಾಡನ್ನು ಮಾಡಿದ್ದಾರೆ ಯೋಗರಾಜ್‌ ಭಟ್‌. ಈ ಹಾಡಿಗೆ ಅವರೇ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿದ್ದಾರೆ. ಇನ್ನೂ, "ಯಾವನಿಗ್‌ ವೋಟ್ಹಾಕೋದೋ ಗೊತ್ತಾಗ್ತಾ ಇಲ್ಲ ...' ಅಂತಿದ್ದರೆ, ಒಮ್ಮೆ ಹಾಡನ್ನು ನೋಡಿ ...

Back to Top