CONNECT WITH US  

​​​​​​​"ಜನನಾ ಮರಣಾ…' ಇದು "ಯೋಗಿ ದುನಿಯಾ: ಮನಕಲಕುವ ಸಾಂಗ್ ವೀಕ್ಷಿಸಿ

ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ "ಯೋಗಿ ದುನಿಯಾ ಚಿತ್ರದ "ಜನನಾ ಮರಣಾ…' ಎಂಬ ಚಿತ್ರದ ನಾಯಕಿಯ ಪರಿಸ್ಥಿತಿಯನ್ನು ಬಿಚ್ಚಿಡುವ ಹಾಡು ಎಲ್ಲರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಿಟ್ ಆಗಿದೆ. ಅಲ್ಲದೇ ಲೂಸ್ ಮಾದ ಯೋಗಿ ತಮ್ಮದೇ ಬ್ಯಾನರ್ನಲ್ಲಿ ಈ ಚಿತ್ರವನ್ನು ಮಾಡುತ್ತಿದ್ದು, ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆಯುವದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ಹರಿ. ಇನ್ನು ಈ ಚಿತ್ರಕ್ಕೆ ಎನ್.ವೆಂಕಟೇಶ್ ಬಾಬು, ಮಹೇಶ್ ಸಿದ್ದರಾಜು ಬಂಡವಾಳ ಹಾಕಿದ್ದಾರೆ. ಟ್ರಾವೆಲ್ ಏಜೆಂಟ್ ಪಾತ್ರದಲ್ಲಿ ನಾಯಕ ನಟ ಯೋಗಿ ಅಭಿನಯಿಸಿದರೆ, ಯೋಗಿ ಎದುರಿಗೆ ನಾಯಕಿಯಾಗಿ ಹಿತ ಚಂದ್ರಶೇಖರ್ ನಟಿಸಿದ್ದಾರೆ. ಯೋಗಿ ಅಣ್ಣ ಮಹೇಶ್ ಮುಸ್ಲಿಂ ಹುಡುಗನ ಪಾತ್ರದಲ್ಲಿ ಮತ್ತು ವಸಿಷ್ಠ ಸಿಂಹ ವಿಲನ್ ಆಗಿ ಮಿಂಚಿದ್ದಾರೆ. ಚಿತ್ರದ ಮನಕಲಕುವ ಸಾಂಗ್ ವೀಕ್ಷಿಸಿ.

Back to Top