CONNECT WITH US  

"ಯುವರತ್ನ'ನಾದ ರಾಜಕುಮಾರ: ಪವರ್ ಫಸ್ಟ್​​ಲುಕ್ ವೀಕ್ಷಿಸಿ

ಪವರ್ ಸ್ಟಾರ್ ಪುನೀತ್​​ರಾಜಕುಮಾರ್ ಅವರ 29ನೇ ಚಿತ್ರದ ಟೈಟಲ್ ಏನು ಎಂದು ಅಪ್ಪು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್​​ರಾಜಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಹೊಸ ಚಿತ್ರದ ಟೈಟಲ್ ಗುರುವಾರ ಅನೌನ್ಸ್​​ ಆಗಿದ್ದು, ಸಿನಿಮಾದ ಫಸ್ಟ್​​ಲುಕ್​​ ಕೂಡ ರಿಲೀಸ್​​ ಆಗಿದೆ. ಹೌದು! ಅಪ್ಪು ಅಭಿಮಾನಿಗಳೇ ಪುನೀತ್ ಅವರ 29ನೇ ಸಿನಿಮಾದ ಟೈಟಲನ್ನು ಲಾಂಚ್ ಮಾಡಿದ್ದು "ಯುವರತ್ನ' ಎಂದು ಹೆಸರಿಡಲಾಗಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿ ನಿರ್ದೇಶಕ ಸಂತೋಷ್ ಆನಂದ್​​​ರಾಮ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಇನ್ನು "ಯುವರತ್ನ' ಸಿನಿಮಾವನ್ನು ಪಿಆರ್​ಕೆ ಬ್ಯಾನರ್​ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದ್ದು, "ಅಪ್ಪು' ಸಿನಿಮಾ ನಂತರ ಪುನೀತ್​​ರಾಜಕುಮಾರ್ 16 ವರ್ಷದ ಕಾಲೇಜ್ ವಿದ್ಯಾರ್ಥಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಚಿತ್ರದ ಶೂಟಿಂಗ್​​ ಯಾವಾಗ ಶುರುವಾಗಲಿದೆ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಪವನ್ ಒಡೆಯರ್ ನಿರ್ದೇಶನದ "ನಟಸಾರ್ವಭೌಮ' ಚಿತ್ರದಲ್ಲಿ ಪುನೀತ್​​ರಾಜಕುಮಾರ್ ನಟಿಸುತ್ತಿದ್ದು, ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದಿದೆ. ಈ ಸಿನಿಮಾದ ನಂತರ ಸಂತೋಷ್ ಆನಂದ್ ರಾಮ್ ಸಿನಿಮಾ ಆರಂಭವಾಗಲಿದೆ. ಚಿತ್ರದ ಪವರ್ ಫಸ್ಟ್​​ಲುಕ್ ವೀಕ್ಷಿಸಿ.

Back to Top