ಬೇಕಲ ಠಾಣೆ: ತುಕ್ಕು ಹಿಡಿಯುತ್ತಿವೆ ವಾಹನಗಳು

Team Udayavani, Aug 23, 2019, 5:08 AM IST

22KSDE22A

ಕಾಸರಗೋಡು: ಕಾನೂನು ಪಾಲಿಸುತ್ತಿರುವ ಬೇಕಲ ಪೊಲೀಸ್‌ ಠಾಣೆ ಪರಿಸರದಲ್ಲಿ ಲಕ್ಷಾಂತರ ರೂ. ಮೌಲ್ಯದ ವಾಹನಗಳು ತುಕ್ಕು ಹಿಡಿದು ನಾಶದಂಚಿಗೆ ಸರಿದಿದೆ. ಠಾಣೆ ಪರಿಸರದಲ್ಲಿ ಇರಿಸಿರುವ ವಾಹನಗಳ ಸುತ್ತ ಕಾಡು ಪೊದೆ ಬೆಳೆದು, ಸೊಳ್ಳೆ ಕಾಟಕ್ಕೂ ಕಾರಣವಾಗಿದೆ.

ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ವಶಪಡಿಸಿಕೊಂಡಿರುವ ಬೇಕಲ ಠಾಣೆ ಪೊಲೀಸರು ಠಾಣೆ ಪರಿಸರದಲ್ಲಿ ಇರಿಸಿದ್ದಾರೆ. ಹಲವು ವರ್ಷಗಳ ಹಿಂದಿನ ವಾಹನಗಳು ಇಲ್ಲಿ ಇರಿಸಲಾಗಿದ್ದು, ವಾಹನಗಳು ತುಕ್ಕು ಹಿಡಿಯುತ್ತಾ ನಾಶದತ್ತ ಸಾಗಿವೆ. ಮದ್ಯ ಸಾಗಾಟ, ಮರಳು ಸಾಗಾಟ, ಗಾಂಜಾ ಮೊದಲಾದ ಮಾದಕ ವಸ್ತುಗಳ ಸಾಗಾಟ, ಹಿಂಸೆಗೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡು ಇಲ್ಲಿ ಇರಿಸಲಾಗಿದೆ. ಈ ವಾಹನಗಳನ್ನು ಬಿಟ್ಟು ಕೊಡಬೇಕಾದರೆ ಪ್ರಕರಣಗಳ ತೀರ್ಪು ಬರಬೇಕು. ಅಲ್ಲಿಯ ವರೆಗೆ ಈ ವಾಹನಗಳು ಮಳೆ, ಬಿಸಿಲಿಗೆ ಮೈಯೊಡ್ಡಿ ತುಕ್ಕು ಹಿಡಿಯುತ್ತಾ ಇಲ್ಲಿಯೇ ಇರಬೇಕಾಗುತ್ತದೆ. ನ್ಯಾಯಾಲಯದ ತೀರ್ಪು ಬರುವ ವೇಳೆಗೆ ಈ ವಾಹನಗಳು ಸಂಪೂರ್ಣವಾಗಿ ತುಕ್ಕು ಹಿಡಿದು ನಾಶವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಈಗಾಗಲೇ ಹಲವು ವಾಹನಗಳನ್ನು ಸಾಗಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ದಿನದಿಂದ ದಿನಕ್ಕೆ ವಾಹನಗಳಿಗೆ ಹೆಚ್ಚೆಚ್ಚು ತುಕ್ಕು ಹಿಡಿಯುತ್ತಿದ್ದು ಮುಂದಕ್ಕೆ ಇದನ್ನು ಬಳಸಲು ಸಾಧ್ಯವಾಗದಂತಿದೆ. ಲಕ್ಷಾಂತರ ರೂ. ಮೌಲ್ಯದ ಈ ವಾಹನಗಳು ಹೀಗೆ ನಾಶವಾಗುತ್ತಿದ್ದು, ಪರಿಸರದಲ್ಲಿ ಸೊಳ್ಳೆ ಕಾಟವು ಅಧಿಕವಾಗಿದೆ.

ದಾಖಲೆ ಪತ್ರ ವಾಹನ
ಇವುಗಳಲ್ಲಿ ಹಲವು ಕಳವು ಮಾಡಿದ ವಾಹನಗಳೂ ಇವೆ. ಕಳವು ಮಾಡಿದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಇಲ್ಲಿರಿಸಿದ್ದಾರೆ. ಇನ್ನು ಕೆಲವು ವಾಹನಗಳಿಗೆ ಸರಿಯಾದ ದಾಖಲೆ ಪತ್ರಗಳು ಇಲ್ಲದ ಕಾರಣಕ್ಕೆ ವಶಪಡಿಸಿಕೊಳ್ಳ ಲಾಗಿದ್ದು, ಅದರ ವಾರಸುದಾರರು ಇಂತಹ ವಾಹನಗಳನ್ನು ಕೊಂಡೊಯ್ಯಲು ಬಂದಿಲ್ಲ. ಈ ಕಾರಣದಿಂದ ಇಲ್ಲೇ ಇರಿಸಬೇಕಾಗಿ ಬಂದಿದೆ. ಕೆಲವು ವಾಹನಗಳಿಗೆ ಸಂಬಂಧಿಸಿ ತೀರ್ಪು ಬಂದಿದ್ದರೂ, ಅಂತಹ ವಾಹನಗಳನ್ನು ಕೊಂಡೊಯ್ಯಲು ವಾರೀಸುದಾರರು ಬಂದಿಲ್ಲ. ಈ ವಾಹನಗಳ‌ನ್ನು ಕೊಂಡೊಯ್ದು ಏನು ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಯಾರೂ ಕೊಂಡೊಯ್ದಿಲ್ಲ. ಈ ವಾಹನಗಳು ಧೂಳು ತಿನ್ನುತ್ತಾ, ತುಕ್ಕು ಹಿಡಿಯುತ್ತಾ ಸಂಪೂರ್ಣ ನಾಶವಾಗುತ್ತಿದೆ.

ಚಾಲು ಮಾಡಲು ಸಾಧ್ಯವಿಲ್ಲ
ಠಾಣೆಯಿಂದ ಈ ವಾಹನಗಳನ್ನು ಕೊಂಡೊಯ್ದರೂ ಇದನ್ನು ದುರಸ್ತಿ ಮಾಡಿ ಮತ್ತೆ ಚಾಲು ಮಾಡಲು ಸಾಧ್ಯವಿಲ್ಲ. ಅಷ್ಟು ಕೆಟ್ಟು ಹೋಗಿದೆ. ಈ ಕಾರಣದಿಂದ ನ್ಯಾಯಾಲಯದಿಂದ ತೀರ್ಪಾದರೂ ವಾಹನವನ್ನು ಯಾರೂ ಕೊಂಡು ಹೋಗುವುದಿಲ್ಲ. ಇದರಿಂದಾಗಿ ಬೇಕಲ ಪೊಲೀಸ್‌ ಠಾಣೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು. ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂತಹ ಪರಿಸ್ಥಿತಿ ಬೇಕಲ ಪೊಲೀಸ್‌ ಠಾಣೆಗೆ ಮಾತ್ರ ಸೀಮಿತವಾಗಿಲ್ಲ. ಕಾಸರಗೋಡು ಜಿಲ್ಲೆಯ ಕಾಸರಗೋಡು, ಕುಂಬಳೆ, ಮಂಜೇಶ್ವರ, ಬದಿಯಡ್ಕ, ಆದೂರು ಹೀಗೆ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಇದೇ ಪರಿಸ್ಥಿತಿಯಿದೆ.

ಕಾಡು ಪೊದೆ
ವಾಹನಗಳಲ್ಲೂ ಕಾಡು ಪೊದೆ ಬೆಳೆದು ಹಾವು ಮೊದಲಾದವು ಇದರಲ್ಲಿ ಬೀಡು ಬಿಟ್ಟಿವೆ. ರಾಶಿ ಹಾಕಿರುವ ಈ ವಾಹನ ಗಳಿಗೆ ಅಕಸ್ಮಾತ್‌ ಬೆಂಕಿ ಹತ್ತಿಕೊಂಡರೆ ಸಂಪೂರ್ಣ ನಾಶವಾಗುವುದು ಖಚಿತ ಎಂಬಂತಿದೆ. ಕಾಸರಗೋಡು ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಚೆರ್ಕಳದಲ್ಲಿ ಇರಿಸಲಾಗಿದ್ದು, ಒಂದೆರಡು ಬಾರಿ ಬೆಂಕಿ ಹತ್ತಿಕೊಂಡ ಘಟನೆ ನಡೆದಿತ್ತು. ಹಲವು ವಾಹನಗಳು ಸಂಪೂರ್ಣ ನಾಶವಾಗಿದ್ದವು. ಅಂತಹ ಪ್ರಸಂಗ ಬೇಕಲ ಠಾಣೆ ಪರಿಸರದಲ್ಲಿ ಇರಿಸಿರುವ ವಾಹನಗಳಿಗೂ ಬರಬಹುದು ಎಂಬುದಾಗಿ ಸಾರ್ವತ್ರಿಕವಾಗಿ ಅಭಿಪ್ರಾಯ ಕೇಳಿಬರುತ್ತಿವೆ.

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.