ಜೀವನಿ 2020-21 ಮನೆಮನೆಯಲ್ಲೂ ಜೈವಿಕ ಕೃಷಿಗೆ ಚಾಲನೆ

Team Udayavani, Feb 15, 2020, 6:40 AM IST

Jivani

ಬದಿಯಡ್ಕ: ಆರೋಗ್ಯವಂತ ಬದುಕಿಗಾಗಿ ಆರೋಗ್ಯಪೂರ್ಣ ಆಹಾರ ಸೇವನೆ ಅತೀ ಅಗತ್ಯ. ದೆ„ಹಿಕ ಆರೋ ಗ್ಯದ ಮೇಲೆ ಸೇವಿಸುವ ಆಹಾರ ಬೀರುವ ಪರಿಣಾಮವನ್ನು ಮನಗಂಡು ರೋಗಮುಕ್ತ, ನೆಮ್ಮದಿಯ ಜೀವನಕ್ಕಾಗಿ ವಿಷಮುಕ್ತ ವಸ್ತುಗಳನ್ನು ಅಡುಗೆಯಲ್ಲಿ ಬಳಸಬೇಕು. ಆದರೆ ಹಣಗಳಿಕೆಯೊಂದೇ ಉದ್ದೇಶವಾಗಿರುವ ಮಾರುಕಟ್ಟೆಯಲ್ಲಿ ಧಾರಾಳ ರಾಸಾಯನಿಕಗಳನ್ನು ಬಳಸಿ ಬೆಳೆಸಿದ ತರಕಾರಿಗಳು ಮತ್ತಿತರ ಆಹಾರ ಪದಾರ್ಥಗಳು ಸುಲಭವಾಗಿ ಲಭಿಸುತ್ತಿವೆ. ಅವುಗಳ ಸೇವೆನೆಯಿಂದ ಜನರ ಆರೋಗ್ಯ ಮತ್ತು ಆಯುಷ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಈ ಸಮಸ್ಯೆ ಹೋಗಲಾಡಿಸಿ ಜನರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸರಕಾರ ಜೀವನಿ 2020-21, ನಮ್ಮ ಕೃಷಿ ನಮ್ಮ ಆರೋಗ್ಯ ಎಂಬ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಜಾರಿಗೊಳಿಸಿದೆ. ಆದರೆ ಬದಿಯಡ್ಕ ಪಂಚಾಯತ್‌ ಈ ಯೋಜನೆಯನ್ನು ಮನೆಮನೆಗಳಿಗೂ ತಲುಪುವ ಉದ್ದೇಶದಿಂದ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇರಳ ರಾಜ್ಯ ಕೃಷಿ ಇಲಾಖೆಯು ಮೊದಲ ಹಂತದಲ್ಲಿ ಜನಪ್ರತಿನಿಧಿಗಳ ಮತ್ತು ಪತ್ರಕರ್ತರ ಮನೆಗಳಲ್ಲಿ ಈ ಪದ್ಧತಿಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ.

ಆ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್‌ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಅವರ ನಿವಾಸದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್‌ ಅವರ ಉಪಸ್ಥಿತಿಯಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಯೋಜನೆಗೆ ಚಾಲನೆ ನೀಡಲಾಯಿತು.

ಕುಟುಂಬಶ್ರೀ ಬೆಂಬಲ
ಬದಿಯಡ್ಕ ಕೃಷಿ ಇಲಾಖೆಯ ಸಹಕಾರದೊಂದಿಗೆ ಬದಿಯಡ್ಕ ಪಂಚಾಯತ್‌ ನೇತƒತ್ವದಲ್ಲಿ ಮನೆಮನೆಯಲ್ಲೂ ಜೈವಿಕ ಕೃಷಿ ಬೆಳೆಸುವ ಈ ಸತ್ಕಾರ್ಯಕ್ಕೆ ಬೆಂಬಲ ಸೂಚಿಸಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಅಗತ್ಯವಿರುವ ತರಕಾರಿ ಬೆಳೆಯುವ ಭರವಸೆ ನೀಡಿದ್ದಾರೆ. ಆರೋಗ್ಯವನ್ನು ಸಂರಕ್ಷಿಸುವ ಪದ್ಧತಿಗಳು ಈ ಕಾಲಘಟ್ಟದಲ್ಲಿ ಅತೀ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿಧಿ ಮತ್ತು ಪತ್ರಕರ್ತರ ಮನೆಗಳಲ್ಲಿ ಜೀವನಿ ಮೊದಲ ಹಂತದ ಜೀವನಿ ಯೋಜನೆಯಲ್ಲಿ ಜನಪ್ರತಿನಿಧಿಗಳ ಹಾಗೂ ಪತ್ರಕರ್ತರ ಮನೆಗಳಲ್ಲಿ ಜೈವಿಕ ತರಕಾರಿ ಬೆಳೆಯುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ. ಜನರಿಗೆ ಈ ಪದ್ಧತಿಯ ಬಗ್ಗೆ ವಿಶ್ವಾಸ ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಮಾದರಿಯಾಗಿ ಈ ಹೆಜ್ಜೆ.

420 ದಿವಸಗಳ ಬೃಹತ್‌ ಪದ್ಧತಿ
ಜೀವನಿ 2020-21 ಪದ್ಧತಿಯು 1-1-2020 ರಿಂದ 2021 ವಿಷು ಹಬ್ಬದ ವರೆಗಿನ 420 ದಿನಗಳ ಬƒಹತ್‌ ಪದ್ಧತಿಯಾಗಿದ್ದು 2021ರ ವಿಷು ಹಬ್ಬಕ್ಕಾಗುವಾಗ ಕೇರಳದ ಮನೆಮನೆಗಳಲ್ಲೂ ಜೈವಿಕವಾಗಿ ಬೆಳೆದ ತರಕಾರಿ ಲಭ್ಯವಾಗುವಂತೆ ಮಾಡುವುದೇ ಇದರ ಉದ್ಧೇಶವಾಗಿದೆ. ಈ ರೀತಿ ಕೃಷಿ ಮಾಡುವ ಮೂಲಕ ಶುದ್ಧ ಗಾಳಿಯನ್ನು ಉಸಿರಾಡುವುದೂ ಸಾಧ್ಯಾವಾಗುತ್ತದೆ. ಆ ಮೂಲಕ ಆರೋಗ್ಯ ಸಂರಕ್ಷಣೆಯ ಕೆಲಸ ಸುಲಭವಾಗುತ್ತದೆ ಎಂಬ ದೂರದೃಷ್ಠಿಯ್ನು ಕೃಷಿ ಇಲಾಖೆ ಹೊಂದಿದೆ.

ಉಪಯುಕ್ತ ಯೋಜನೆ
ಕೃಷಿಗೆ ಪ್ರೋತ್ಸಾಹ ನೀಡುವ ಈ ಪದ್ಧತಿ ಜನರನ್ನು ಜಾಗƒತರನ್ನಾಗಿಸುತ್ತದೆ. ಆರೋಗ್ಯವಂತ ಸಮಾಜಕ್ಕಾಗಿ ಈಗ ಪ್ರಯತ್ನಿಸದಿದ್ದರೆ ಮುಂದೆ ಜನರ ಆರೋಗ್ಯ ಮತ್ತು ಆಯುಸ್ಸು ಎರಡೂ ಕಡಿಮೆಯಾಗುತ್ತದೆ. ಆದುದರಿಂದ ಕೃಷಿ ಇಲಾಖೆ ಫಲಪ್ರದವಾದ, ಉಪಯುಕ್ತವಾದ ಹಲವಾರು ಯೋಜನೆಗಳನ್ನು ಹೊರತರುತ್ತಿದೆ.
– ಮೋಹನನ್‌, ಸಹಾಯಕ ಕೃಷಿ ಅಧಿಕಾರಿ, ಬದಿಯಡ್ಕ ಕೃಷಿ ಇಲಾಖೆ

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.