ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 19 ಮಂದಿಗೆ ಸೋಂಕು ದೃಢ


Team Udayavani, Mar 24, 2020, 4:36 AM IST

ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 19 ಮಂದಿಗೆ ಸೋಂಕು ದೃಢ

ಕಾಸರಗೋಡು: ಮಾರಣಾಂತಿಕ ಕೋವಿಡ್-19 ವೈರಸ್‌ ಸೋಂಕು ದೇಶಾದ್ಯಂತ ವೇಗದಲ್ಲಿ ಹರಡುತ್ತಿರುವಂತೆ ಕೇರಳದಲ್ಲಿ ಮಾ. 31ರ ವರೆಗೆ ಲಾಕ್‌ಡೌನ್‌ ಘೋಷಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 19 ಮಂದಿಯಲ್ಲಿ ಕೋವಿಡ್-19 ದೃಢವಾಗಿದೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಬಾಧಿತರ ಒಟ್ಟು ಸಂಖ್ಯೆ 38ಕ್ಕೇರಿದೆ.

ರಾಜ್ಯದಲ್ಲಿ ಸೋಮವಾರ ಒಟ್ಟು 28 ಜನರಿಗೆ ಕೊರೊನಾ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ 5, ಪತ್ತನಂತಿಟ್ಟ-1, ಎರ್ನಾಕುಳಂ – 2, ತೃಶ್ಶೂರ್‌ -1, ಕಾಸರಗೋಡು-19 ಎಂಬಂತೆ ಕೊರೊನಾ ದೃಢಪಡಿಸಲಾಗಿದೆ. ಇವರಲ್ಲಿ 25 ಮಂದಿ ದುಬಾೖಯಿಂದ ಬಂದವರು. ರಾಜ್ಯದಲ್ಲಿ ಒಟ್ಟು 91 ಮಂದಿ ಕೋವಿಡ್-19 ಪತ್ತೆಹಚ್ಚಲಾಗಿದೆ. ನಾಲ್ವರು ರೋಗ ಮುಕ್ತರಾಗಿದ್ದಾರೆ.

64,320 ಮಂದಿ ನಿಗಾದಲ್ಲಿ
ಸೋಮವಾರ ರಾಜ್ಯದಲ್ಲಿ 64,320 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 63,937 ಮಂದಿ ಮನೆಯಲ್ಲೂ, 383 ಮಂದಿ ಆಸ್ಪತ್ರೆಯಲ್ಲೂ ನಿಗಾದಲ್ಲಿದ್ದಾರೆ. ಸೋಮವಾರ 122 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಒಟ್ಟು 4,291 ಮಂದಿಯ ಸ್ಯಾಂಪಲ್‌ ತಪಾಸಣೆಗೆ ಕಳುಹಿಸಲಾಗಿದ್ದು, ಅದರಲ್ಲಿ 2,987 ಮಂದಿಗೆ ನೆಗೆಟಿವ್‌ ಫಲಿತಾಂಶ ಬಂದಿದೆ.

ಲಾಕ್‌ಡೌನ್‌ ಘೋಷಣೆಯ ಹಿನ್ನೆಲೆಯಲ್ಲಿ ಸಾರಿಗೆಯನ್ನು ಸಂಪೂರ್ಣವಾಗಿ ನಿಲುಗಡೆಗೊಳಿ ಸಲಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಸರ್ವೀಸ್‌ ಸಂಪೂರ್ಣ ನಿಲುಗಡೆಗೊಳಿಲಾಗಿದೆ. ಖಾಸಗಿ ವಾಹನವನ್ನು ಬಳಸಬಹುದು. ಔಷಧ, ಹಾಲು, ಆ್ಯಂಬುಲೆನ್ಸ್‌, ವೈದ್ಯಕೀಯ, ಪತ್ರಿಕೆಗಳಿಗೆ ಯಾವುದೇ ನಿಷೇಧವಿಲ್ಲ.

ಆರಾಧನಾಲಯಗಳಿಗೆ ನಿಬಂಧನೆ ಜಾರಿಗೊಳಿಸಲಾಗಿದೆ. ಜನರು ಸೇರುವ ಕಾರ್ಯಕ್ರಮಗಳನ್ನು ಆರಾಧನಾಲಯಗಳಲ್ಲಿ ಆಯೋಜಿಸಬಾರದು. ಸರಕಾರಿ ಕಚೇರಿಗಳು ಸಂಪೂರ್ಣ ಭದ್ರತೆಯಲ್ಲಿ ಕಾರ್ಯಾಚರಿಸಲಿವೆ. ರಾಜ್ಯದ ಎಲ್ಲ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಲಾಕ್‌ಡೌನ್‌ ಘೋಷಿಸಿರುವುದರಿಂದಾಗಿ ಯಾರೂ ಮನೆಯಿಂದ ಹೊರಗಿಳಿಯಬಾರದು. ಅನಗತ್ಯವಾಗಿ ಹೊರಗೆ ಬಂದರು ಕಠಿನ ಕ್ರಮ ಸಹಿತ ಬಂಧಿಸಲಾಗುವುದು. ಜನರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಒಂದು ಮೀಟರು ಅಂತರ ಕಾಯ್ದುಕೊಳ್ಳಬೇಕು. ಹೊಟೇಲ್‌ಗ‌ಳಲ್ಲಿ ಕುಳಿತುಕೊಂಡು ಆಹಾರ ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಹೋಮ್‌ ಡೆಲಿವರಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಮತ್ತೂಬ್ಬ ಕೇರಳ ಸೋಂಕಿತ ರಾಜ್ಯ ಕರಾವಳಿಯಲ್ಲಿ ಓಡಾಟ
ಸೋಮವಾರ ಕೇರಳದಲ್ಲಿ ಕೊರೊನಾ ಸೋಂಕು ದೃಢಪಟ್ಟ ಕಾಸರಗೂಡು ಪಾಲಿಕಲ್‌ನ 54 ವರ್ಷದ ವ್ಯಕ್ತಿಯು ರಾಜ್ಯದ ಕರಾವಳಿಯಲ್ಲಿ ಓಡಾಟ ನಡೆಸಿದ್ದು ವಿವರ ಲಭ್ಯವಾಗಿದೆ.

ಮಾರ್ಚ್‌ 10ರಂದು ಸಂಜೆ 5.30ಕ್ಕೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಸ್ವಂತ ಕಾರಿನಲ್ಲಿ ಕಾಸರಗೂಡಿಗೆ ತೆರಳಿದ್ದರು. ಬಳಿಕ ಮಾ. 11ರಂದು ಸ್ಥಳೀಯ ಮೀನು ಮಾರುಕಟ್ಟೆಗೆ ಭೇಟಿ. ಮಾ. 18ರ ಮಧ್ಯಾಹ್ನ 3ಕ್ಕೆ ಅತ್ತಾವರದ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿ ಆರೋಗ್ಯ ಪರೀಕ್ಷೆ ಮಾಡಿಸಿ ಕೆಎಂಸಿ ಕ್ಯಾಂಟೀನ್‌ನಲ್ಲಿ ಚಹಾ ಸೇವಿಸಿದ್ದಾರೆ. ಬಳಿಕ 6 ಗಂಟೆಗೆ ಆಟೋ ರಿಕ್ಷಾದಲ್ಲಿ ಮೆಡಿಸಿಟಿ ಕಟ್ಟಡಕ್ಕೆ ತೆರಳಿ ಔಷಧ ಖರೀದಿಸಿ ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ ಮೂಲಕ ಕಾಸರಗೂಡಿಗೆ ವಾಪಸಾಗಿದ್ದಾರೆ. ಮಾರ್ಚ್‌ 20ರಂದು ಖಾಸಗಿ ಕಾರಿನಲ್ಲಿ ಮಂಗಳೂರಿಗೆ ಬಂದು ವೈದ್ಯರನ್ನು ಭೇಟಿ ಮಾಡಿ ಮರಳಿದ್ದರು.

ಈ ಸೋಂಕಿತ ವ್ಯಕ್ತಿ ಸಂಚಾರ ಮಾಡಿದ್ದ ವಿಮಾನದಲ್ಲಿ ಹಾಗೂ ಬಸ್‌ಗಳಲ್ಲಿ ಯಾರಾದರೂ ಪ್ರಯಾಸಿದ್ದರೆ ಕೂಡಲೇ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.